K N Rajanna: ಪರೀಕ್ಷೆಯಲ್ಲಿ ತಾಳಿ ತೆಗೆದರೆ ತಪ್ಪಿಲ್ಲ, ಜನಿವಾರ ತೆಗೆದರೆ ತಪ್ಪೇ? ಸಚಿವರಿಂದ ಖಡಕ್ ಪ್ರಶ್ನೆ

K N Rajanna : ರಾಜ್ಯದಲ್ಲಿ ಜನಿವಾರ ವಿಚಾರ ಭಾರಿ ಸದ್ದು ಮಾಡುತ್ತಿದೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶಕೊಡದ ವಿಚಾರ ಹಾಗೂ ಜನಿವಾರ ತೆಗೆಸಿದ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇಡೀ ಬ್ರಾಹ್ಮಣ ಸಮಾಜವೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಆಗಿದೆ. ಈ ಬೆನ್ನಲ್ಲೇ ಸಚಿವ ಕೆ ಎನ್ ರಾಜಣ್ಣ ಅವರು ಪರೀಕ್ಷೆಯಲ್ಲಿ ತಾಳಿ ತೆಗೆದರೆ ತಪ್ಪಿಲ್ಲ ಆದರೆ ಜನಿವಾರ ತೆಗೆದರೆ ತಪ್ಪೇ ಎಂಬ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜನಿವಾರ ತೆಗೆದಿದ್ದೇ ದೊಡ್ಡ ವಿವಾದ ಎಂದು ಮಾಧ್ಯಮದವರು ಬಿಂಬಿಸುತ್ತಿದ್ದಾರೆ. ಆದರೆ ತಾಳಿ ತೆಗೆದಾಗ ಆ ಸುದ್ದಿ ದೊಡ್ಡದಾಗಲೇ ಇಲ್ಲ. ತಾಳಿ ತೆಗೆದರೇ ತಪ್ಪಿಲ್ಲ, ಜನಿವಾರ ತೆಗೆದರೆ ತಪ್ಪು. ಹೆಣ್ಣುಮಗಳ ತಾಳಿ ತೆಗೆಸಿದಾಗ ಯಾವ ಮಾಧ್ಯಮವೂ ಮಾತನಾಡಲೇ ಇಲ್ಲ. ತಾಳಿಗೆ ಎಷ್ಟು ಮಹತ್ವವಿದೆ, ಜನಿವಾರಕ್ಕೂ ಅಷ್ಟೇ ಮಹತ್ವವಿದೆ ಎಂದ ಅವರು ಮಹಿಳೆಯ ತಾಳಿ ತೆಗೆಸಿದ್ದಕ್ಕೆ ಮಾಧ್ಯಮದಲ್ಲಿ ಯಾವುದೇ ಲೆಕ್ಕ ಇಲ್ಲ ಎಂದು ಕಿಡಿ ಕಾರಿದ್ದಾರೆ.
Comments are closed.