Prithwi Bhat: ಗಾಯಕಿ ಪೃಥ್ವಿ ಭಟ್ ಪ್ರೇಮ ವಿವಾಹ; ಸರಿಗಮಪ ಜ್ಯೂರಿ ಮೇಲೆ ತಂದೆ ಆರೋಪ!

Prithwi Bhat: ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಹೆಸರು ಮಾಡಿರುವ ಪೃಥ್ವಿ ಭಟ್ ತಮ್ಮ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಆಗಿದ್ದು, ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಇವರ ವಿವಾರ ಮಾ.27 ರಂದು ನಡೆದಿದ್ದು, ಈಗ ಗಾಯಕಿಯ ತಂದೆ ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.
ಮಗಳಿಗೆ ಹವ್ಯಕ ಹುಡುಗನನ್ನು ಹುಡುಕಿ ಮದುವೆ ಮಾಡುವ ಆಸೆ ಇತ್ತು. ಈ ಕುರಿತು ಸರಿಗಮಪ ಶೋನಲ್ಲಿ ಜ್ಯೂರಿಯಾಗಿರುವ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರಿಗೆ ತಿಳಿಸಿದ್ದು. ಆಗ ಈ ಪ್ರೀತಿ ವಿಚಾರ ಅವರು ಹೇಳಿದರು. ನಾನು ನನ್ನ ಮಗಳನ್ನು ಇದರ ಕುರಿತು ಕೇಳಿದಾಗ, ನೀವು ತೋರಿಸಿದ ಹುಡುಗನ ಜೊತೆಯೇ ಮದುವೆ ಆಗುತ್ತೇನೆ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದಳು. ಆದರೆ ಇದೀಗ ಆ ನರಹರಿ ದೀಕ್ಷಿತ್ ನನ್ನ ಮಗಳನ್ನು ಧಾರೆ ಎರೆದು ಕೊಟ್ಟಿದ್ದಾರೆ. ನನ್ನಿಂದ ಮದುವೆ ವಿಷಯ ಮುಚ್ಚಿಟ್ಟಿದ್ದಾರೆ ಎಂದು ಹೇಳಿರುವ ವರದಿಯಾಗಿದೆ.
ಹವ್ಯಕ ಸಮಾಜ ನರಹರಿ ದೀಕ್ಷಿತ್ ಅಂಥವರಿಗೆ ಪ್ರೋತ್ಸಾಹ ನೀಡಬಾರದು. ಇದ್ದ ಒಬ್ಬ ಮಗಳ ಧಾರೆಯೆರೆಯದಂತೆ ಮಾಡಿದ್ದಾರೆ ಎಂದು ಆಡಿಯೋ ವೈರಲ್ ಆಗಿದೆ.
Comments are closed.