Maha Kumba Mela: ಕುಂಭಮೇಳ: ಸಿಎಂ ಯೋಗಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸಿದ್ಧತೆ ನಡೆದಿತ್ತು – ಅಖಿಲೇಶ್ ಯಾದವ್

Maha Kumba Mela: ಉತ್ತರ ಪ್ರದೇಶದ(UP) ಪ್ರಯಾಗ್‌ರಾಜ್‌ನಲ್ಲಿ(Prayag Raj) ಆಯೋಜಿಸಲಾದ ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಎಸ್‌ಪಿ(SP) ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), “ಬಿಜೆಪಿ ಇದನ್ನು ರಾಜಕೀಯ ಕುಂಭವನ್ನಾಗಿ ಮಾಡಲು ಬಯಸಿತ್ತು” ಎಂದು ಹೇಳಿದ್ದಾರೆ. “ಈ ಕುಂಭವು ಭಕ್ತರಿಗಾಗಿ ಅಲ್ಲ. ಅವರ (ಮುಖ್ಯಮಂತ್ರಿ ಯೋಗಿ)(Yogi Adityanath) ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲು ಕುಂಭವನ್ನು ಆಯೋಜಿಸುವಲ್ಲಿ ಸಿದ್ಧತೆಗಳು ನಡೆದಿತ್ತು ಎಂಬ ವಿಚಾರ ಕೇಳಿಬಂದಿದೆ” ಎಂದು ಅವರು ಹೇಳಿದರು.
Comments are closed.