WAQF amendment act: ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧ: ಐಪಿಎಸ್ ಅಧಿಕಾರಿ ರಾಜೀನಾಮೆ

Share the Article

WAQF-amendment-act: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲೆ ಅನೇಕ ಬೆಳವಣಿಗಗಳು ನಡೆಯುತ್ತಿದೆ. ಇದೀಗ ಬಿಹಾರದ ಸೀತಾಮರ್ಹಿಯ ನೂರುಲ್ ಹುದಾ ಎಂಬ ಐಪಿಎಸ್‌ ಅಧಿಕಾರಿ(IPS Officer) ರಾಜೀನಾಮೆ(Resign) ನೀಡಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆಯ ರೂಪವಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 1995 ರ ಐಪಿಎಸ್ ಬ್ಯಾಚ್‌ನ ಸದಸ್ಯರು.

ಅವರ ನಿವೃತ್ತಿಗೆ ಇನ್ನೇನು ಐದು ವರ್ಷ ಮಾತ್ರ ಬಾಕಿ ಇತ್ತು. ಇದೀಗ 28 ವರ್ಷಗಳ ಪೊಲೀಸ್ ವೃತ್ತಿ ಜೀವನವನ್ನು ಮುಗಿಸಿ, ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅವರು ಮಾಜಿ ಸಚಿವ ಮತ್ತು ಹಿರಿಯ ರಾಜಕೀಯ ನಾಯಕ ಮುಖೇಶ್ ಸಾಹ್ನಿಯವರ ವಿಕಾಸೀಲ್ ಇನ್ಸಾನ್ ಪಕ್ಷವನ್ನು ಸೇರಿದ್ದಾರೆ.

ಇವರು 1995 ರಲ್ಲಿ ಐಪಿಎಸ್ಗೆ ಸೇರಿದ ನಂತರ ನೂರುಲ್ ಹುದಾ, ಧನ್ಬಾದ್, ದೆಹಲಿ ಮತ್ತು ಅಸನ್ಸೋಲ್ ನಂತಹ ಪ್ರದೇಶಗಳಲ್ಲಿ ಅತ್ಯುತ್ತಮ ಕೆಲಸ ಮಾಡಿ ಒಳ್ಳೆ ಅಧಿಕಾರಿ ಎಂಬ ಹೆಸರು ಗಳಿಸಿದ್ದಾರೆ. ರೈಲ್ವೆ ಸುರಕ್ಷತೆ ಮತ್ತು ನಕ್ಸಲ್ ನಿಯಂತ್ರಣದಂತಹ ಕ್ಷೇತ್ರಗಳಲ್ಲಿ ಕೂಡ ಅವರ ಕೊಡುಗೆಗಳು ಅಪಾರ. ಅವರು ತಮ್ಮ ಸಕ್ರಿಯ ಜೀವನದಲ್ಲಿ ಎರಡು ವಿಶಿಷ್ಟ ಸೇವಾ ಪದಕಗಳು ಮತ್ತು ಎರಡು ಮಹಾನಿರ್ದೇಶಕ ಚಕ್ರಗಳನ್ನು ಗೆದ್ದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ತಮ್ಮ ಊರಿನಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ನೂರುಲ್ ಹುದಾ, ಒಬ್ಬ ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತ ಕೂಡ ಹೌದು.

Comments are closed.