Gift: ಕೊಟ್ರೆ ಇಂಥ ಗಿಫ್ಟ್ ಕೊಡಬೇಕು.. ಗೆಳೆತನ ಅಂದ್ರೆ ಇದೇ ನೋಡಿ

Gift: ಭಾರತೀಯ(Indian) ಉದ್ಯಮಿ ಪ್ರವೀಣ್ ಗಣೇಶನ್ ಅವರ ಹುಟ್ಟುಹಬ್ಬದಂದು(Birthday) ಅವರ ಆತ್ಮೀಯ ಸ್ನೇಹಿತ ಚೀನಾದಿಂದ(China) ಊಹಿಸಲು ಆಗದಂತಗ ಉಡುಗೊರೆಯನ್ನು ನೀಡಿದ್ದಾರೆ. ನಿಜಕ್ಕೂ ಗಣೇಶ್ ಅವರಿಗೆ ಉಡುಗೊರೆಯನ್ನು ನೋಡಿದಾಗ ಅಚ್ಚರಿಯಾಗಿದೆ. BMW iX1 ಎಲೆಕ್ಟ್ರಿಕ್ SUVಯನ್ನು ಉಡುಗೊರೆಯಾಗಿ ನೀಡಿದಾಗ ಅವರಿಗೆ ಒಂದು ದೊಡ್ಡ ಶಾಕ್ ಆಗಿತ್ತು. ಕಳೆದ ವರ್ಷ ಪ್ರವೀಣ್ ಅವರ ಕಾರು ಕೋಮಡುಕೊಳ್ಳುವ ಕನಸನ್ನುಹಂಚಿಕೊಂಡಿದ್ದರು. ಅವರ ಸ್ನೇಹಿತ ಇದೀಗ ಅದನ್ನು ನನಸಾಗಿಸಿದ್ದಾರೆ.

ಈ ಹೃದಯಸ್ಪರ್ಶಿ ಸಂಬಂಧ, ನಿಜವಾದ ಸ್ನೇಹವು ಗಡಿಗಳನ್ನು ಮೀರಿ ಕನಸುಗಳನ್ನು ವಾಸ್ತವಕ್ಕೆ ಹೇಗೆ ತಿರುಗಿಸುತ್ತದೆ ಎಂಬುದನ್ನು ತೋರಿಸುತ್ತದೆ. ₹66.90 ಲಕ್ಷ ಬೆಲೆಯ BMW iX1 ಒಂದು ಸುಂದರ ಹಾಗೂ ಶಕ್ತಿಯುತ ಎಲೆಕ್ಟ್ರಿಕ್ SUV ಕಾರ್ ಆಗಿದೆ. ಇದು ಕೇವಲ 5.6 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆಗೆ ಹೋಗಬಹುದು ಮತ್ತು ಒಂದೇ ಚಾರ್್ಾನಲ್ಲಿ 440 ಕಿಮೀ ವರೆಗೆ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಇದು ವೇಗದ ಚಾರ್ಜಿಂಗ್ ಅನ್ನು ಸಹ ಹೊಂದಿದೆ. ಇದು ಆಧುನಿಕ, ಪರಿಸರ ಸ್ನೇಹಿ ಚಾಲನೆಗೆ ಸೂಕ್ತವಾಗಿದೆ.
Comments are closed.