Gadag: ಮಾಜಿ ಪ್ರೇಮಿಯಿಂದ ವಿಡಿಯೋ ವೈರಲ್‌ ಬ್ಲ್ಯಾಕ್‌ಮೇಲ್‌; ಮದುವೆ ಫಿಕ್ಸ್‌ ಆಗಿದ್ದ ಯುವತಿ ಆತ್ಮಹತ್ಯೆ!

Share the Article

Gadag: ಮದುವೆ ಸಂಭ್ರಮದಲ್ಲಿದ್ದ ಯುವತಿ ಮಾಜಿ ಪ್ರೇಮಿ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ ಮರ್ಯಾದೆಗೆ ಹೆದರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

ಸಾಯಿರಾಬಾನು ನದಾಫ್‌ (29) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಸಾಯಿರಾಬಾನು ಡೆತ್‌ನೋಟು ಬರೆದಿದ್ದು, ಮೈಲಾರಿ ಎಂಬಾತ ಬ್ಲ್ಯಾಕ್‌ಮೇಲ್‌ ಆರೋಪ ಕೇಳಿ ಬಂದಿದೆ.  ಸಾಯಿರಾಬಾನು ನದಾಫ್‌ ಮೇ.8 ರಂದು ಮದುವೆ ನಿಗದಿಯಾಗಿತ್ತು. ಮದುವೆ ತಯಾರಿ ಕೂಡಾ ನಡೆದಿತ್ತು. ಪೋಷಕರು ಮದುವೆ ವಸ್ತುಗಳ ಖರೀದಿಗೆಂದು ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿದ್ದಾಳೆ. ಮನೆಯ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೈಲಾರಿ ಜೊತೆ ಸಾಯಿರಾಬಾನು ನದಾಪ್‌ ಐದು ವರ್ಷಗಳ ಹಿಂದೆ ಲವ್‌ ಬ್ರೇಕಪ್‌ ಆಗಿತ್ತು. ತೊಂದರೆ ಕೊಡಲ್ಲ ಎಂದು ಹೇಳಿ ಮಾಜಿ ಪ್ರೇಮಿ ಬರ್ತ್‌ಡೇ ಆಚರಿಸಿದ್ದ. ಆದರೆ ಮತ್ತೆ ಐದು ವರ್ಷಗಳ ಬಳಿಕ ಎಂಟ್ರಿ ನೀಡಿದ ಈತ, ವೀಡಿಯೋ, ಫೋಟೋ ವೈರಲ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

 

ದೈಹಿಕ ಶಿಕ್ಷಕಿಯಾಗಿ ಸಾಯಿರಾಬಾನು ಕೆಲಸ ಮಾಡುತ್ತಿದ್ದು, ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಕುಸ್ತಿ ಸೇರಿ ಹಲವು ಕ್ರೀಡೆಗಳಲ್ಲಿ ಸಾಯಿರಾಬಾನು ಸಾಧನೆ ಮಾಡಿದ್ದಾರೆ.

Comments are closed.