Gender Surgery: ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಾಜಿ ಕ್ರಿಕೆಟಿಗನ ಮಗ: ನಗ್ನ ಚಿತ್ರಗಳನ್ನು ಕಳುಹಿಸಿದ ಕ್ರಿಕೆಟಿಗರು

Share the Article

Gender Surgery: ಭಾರತದ ಮಾಜಿ ಕ್ರಿಕೆಟಿಗ(Cricketer) ಸಂಜಯ್ ಬಂಗಾರ್ ಅವರ ಟ್ರಾನ್ಸ್ ಮಗಳು(Transgender) ಅನಯಾ ಬಂಗಾರ್(Anaya Bangar), ತಾನು ಹೆಣ್ಣಾಗಿ ಬದಲಾದ ನಂತರ ಕೆಲವು ಕ್ರಿಕೆಟಿಗರು ತಮ್ಮ ನಗ್ನ ಚಿತ್ರಗಳನ್ನು(Nude photos) ಕಳುಹಿಸಿದ್ದಾರೆಂದು ಬಹಿರಂಗಪಡಿಸಿದ್ದಾರೆ. “ಅನುಭವಿ ಕ್ರಿಕೆಟಿಗನೊಬ್ಬ ‘ನಾನು ನಿಮ್ಮೊಂದಿಗೆ ಮಲಗಲು ಬಯಸುತ್ತೇನೆ’ ಎಂದು ನನ್ನ ಬಳಿ ಹೇಳಿದ್ದರು. ಈ ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ವಿಷಕಾರಿ ಪುರುಷತ್ವದಿಂದ ತುಂಬಿದೆ. ತಂದೆ ಪ್ರಸಿದ್ಧ ವ್ಯಕ್ತಿಯಾದ್ದರಿಂದ ಕೆಲ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕಾಯಿತು” ಎಂದು ಅನಯಾ ಹೇಳಿದರು.

ಇವರು ಕೂಡ ತಂದೆಯಂತೆ ಕ್ರಿಕೆಟ್‌ ಜಗತ್ತಿಗೆ ಕಾಲಿಟ್ಟು ವಯೋಮಿತಿ ಕ್ರಿಕೆಟ್ ಆಡಿದ್ದರು. ಆದರೆ ಇದೀಗ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರೆಸಲು ಕೆಲವೊಂದು ಅಡ್ಡಿಗಳು ಎದುರಾಗಿದೆ ಎಂದು ಅನಯಾ ಹೇಳಿದ್ದಾರೆ. ಅನಯಾ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ.

ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ, “ನಾನು ಹುಡುಗ ಅಲ್ಲ ಹುಡುಗಿ ಎಂದು ನೀವು ಯಾವಾಗ ಅರಿತುಕೊಂಡ್ರಿ?” ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು 8-9 ವರ್ಷದವನಿದ್ದಾಗ, ನಾನು ನನ್ನ ತಾಯಿಯ ಕಪಾಟಿನಿಂದ ಬಟ್ಟೆಗಳನ್ನು ತೆಗೆದುಕೊಂಡು ಧರಿಸುತ್ತಿದ್ದೆ. ನಂತರ, ನಾನು ಕನ್ನಡಿಯಲ್ಲಿ ನೋಡಿಕೊಂಡಾಗ, ‘ನಾನು ಹುಡುಗಿ, ನಾನು ಹುಡುಗಿಯ ಹಾಗೆ ಇರಲು ಇಚ್ಚಿಸುತ್ತೇನೆ ಎಂದು ಹೇಳುತ್ತಿದ್ದೆ,” ಎಂದು ಅನಯಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

Comments are closed.