Tarikere: ಚೀಟಿ ಹಣದ ವಿಚಾರದ ಗಲಾಟೆ; ಯುವಕನ ಹತ್ಯೆ!

Share the Article

Trikere: ಚೀಟಿ ಹಣದ ವಿಷಯಕ್ಕೆ ಸಂಬಂಧಪಟ್ಟಂತೆ ಯುವಕನ ಹತ್ಯೆ ಮಾಡಿರುವ ಘಟನೆ ಅಮೃತಪುರ ಗ್ರಾಮದಲ್ಲಿ ನಡೆದಿದೆ.

ಸಂಜು ನಾಯ್ಕ(26) ಹತ್ಯೆಗೊಳಗದ ಯುವಕ. ರುದ್ರೇಶ ನಾಯ್ಕ ಎಂಬಾತ ಕೊಲೆ ಮಾಡಿರುವ ಆರೋಪವಿದೆ. ಕೊಲೆ ತಪ್ಪಿಸಲೆಂದು ಬಂದ ಅವಿನಾಶ ಎಂಬ ವ್ಯಕ್ತಿಗೂ ರುದ್ರೇಶ್‌ ಕಚ್ಚಿ ಗಾಯಗೊಳಿಸಿದ್ದಾನೆ.

ಅಮೃತಾಪುರ ಸೇವಾಲಾಲ್‌ ಸಂಘದಲ್ಲಿ ಚೀಟಿ ವ್ಯವಹಾರ ನಡೆಸಲಾಗುತ್ತಿತ್ತು. ಸಂಜು ನಾಯ್ಕ ಚೀಟಿ ದುಡ್ಡು ಸರಿಯಾಗಿ ಕಟ್ಟದೆ ಗಲಾಟೆ ಮಾಡುತ್ತಿದ್ದ. ಹೀಗಾಗಿ ವಾಪಸ್‌ ಕಳುಹಿಸಿದ್ದರಂತೆ. ಮನೆಗೆ ಬಂದ ಸಂಜು ಚೀಟಿ ಸದಸ್ಯರ ಜೊತೆ ಫೋನಿನಲ್ಲಿ ವಾಗ್ವದ ಮಾಡಿದ್ದ. ನಂತರ ಇದು ಜಗಳಕ್ಕೆ ಕಾರಣವಾಗಿದೆ. ಪರಿಣಾಮ ರುದ್ರೇಶ್‌, ಸಂಜು ನಾಯ್ಕಗೆ ದೊಣ್ಣೆಯಲ್ಲಿ ಹೊಡೆದಿದ್ದು, ಅಲ್ಲೇ ಸಾವಿಗೀಡಾಗಿದ್ದಾನೆ.

ಆರೋಪಿ ರುದ್ರೇಶ್‌ ನಾಯ್ಕನನ್ನು ತರೀಕೆರೆ ಪೊಲೀಸರು ಬಂಧನ ಮಾಡಿದ್ದಾರೆ.

Comments are closed.