China: ಚೀನಾದಲ್ಲೀಗ 10ಜಿ ನೆಟ್; ವೇಗ ಎಷ್ಟು ಗೊತ್ತೇ?

China: ಚೀನಾದಲ್ಲಿ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಪರಿಚಯ ಮಾಡಿಸಲಾಗಿದೆ. ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಹೆಬ್ಬೆಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಅನುಷ್ಠಾನಗೊಳಿಸಿವೆ.
ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ಸ್ಪೀಡ್ 100 ಎಂಬಿಪಿಎಸ್ ಒಳಗಿದ್ದು, ಚೀನಾವು 1000 ಎಂಬಿಪಿಎಸ್ ವೇಗದ ಬ್ರಾಡ್‌ಬ್ಯಾಂಡ್ ಪರಿಚಯಿಸುವ ಮೂಲಕ ಇಂಟರ್ನೆಟ್ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಕ್ರಾಂತಿಯನ್ನು ಮಾಡಿದೆ.
ಹೆಬ್ಬೆ ಪ್ರಾಂತ್ಯವು ಚೀನಾದ ತಂತ್ರಜ್ಞಾನದ ಹಬ್‌ಗಳಲ್ಲೊಂದಾಗಿದೆ. ಇಲ್ಲೀಗ ಪರಿಚಯಿಸಲ್ಪಟ್ಟಿರುವ ವಿಶ್ವದ ಮೊದಲ 50ಜಿ ಪಿಒಎನ್ ( ಪ್ಯಾಸಿವ್ ಆಪ್ಟಿಕಲ್ ನೆಟ್‌ವರ್ಕ್) ಸೊಲ್ಯೂಷನ್ಸ್ ಅಡಿ ನಿರ್ಮಿಸಲ್ಪಟ್ಟ ಈ ಬ್ರಾಡ್ ಬ್ಯಾಂಡ್ ಮೂಲಸೌಲಭ್ಯ 9,834 ಎಂಬಿಪಿಎಸ್ ಡೌನ್‌ಲೋಡ್ ಸ್ಟೀಡ್ ಹೊಂದಿದ್ದರೆ, 1,008 ಎಂಬಿಪಿಎಸ್ ಸ್ಪೀಡ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. 900 ಜಿಬಿಯಷ್ಟು ಭಾರಿ ಫೈಲ್ ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ.
ಫೈಬರ್ ಆಪ್ಟಿಕ್ ಆರ್ಕಿಟೆಕ್ಟರ್ ಅನ್ನು ಅಪ್ ಗ್ರೇಡ್ ಮಾಡಿದಾಗ ಸಿಂಗಲ್ ಯೂಸರ್ ಬ್ಯಾಂಡ್‌ವಿಡ್ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 102 ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ವರದಿಯಾಗಿದೆ.
Comments are closed.