Belthangady : ಡಿಕೆ ಶಿವಕುಮಾರ್ ಮುಂದೆ ಸೌಜನ್ಯ ತಾಯಿ ಕಣ್ಣೀರು – ಡಿಕೆಶಿ ಹೇಳಿದ್ದೇನು?

Belthangady : ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಸಂದರ್ಭ ಸೌಜನ್ಯ ತಾಯಿ ಅವರನ್ನು ಭೇಟಿ ಮಾಡಿ ಮಗಳ ವಿಚಾರದ ಕುರಿತು ಕಣ್ಣೀರು ಸುರಿಸಿದ್ದಾರೆ. ಆಗ ಡಿಕೆಶಿ ಅವರು ಅವರಿಗೆ ಸಾಂತ್ವನ ಹೇಳಿ, ಬುದ್ಧಿ ಮಾತುಗಳನ್ನು ಹೇಳಿದ್ದಾರೆ.

ಹೌದು, ಬೆಳ್ತಂಗಡಿಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಡಿಕೆಶಿ ಅವರನ್ನ ಭೇಟಿಯಾಗಿ ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ಬೇಡಿಕೊಂಡರು. 13 ವರ್ಷದಿಂದ ನ್ಯಾಯ ಸಿಕ್ಕಿಲ್ಲ ಸಾರ್, ನೀವೇ ನಮಗೆ ನ್ಯಾಯ ಕೊಡಿಸ್ಬೇಕು ಸರ್ ಎಂದು ಕುಸುಮಾವತಿ ಡಿಸಿಎಂ ಡಿಕೆಶಿ ಮುಂದೆ ಗಳಗಳನೆ ಕಣ್ಣೀರಿಟ್ಟರು. ಈ ವೇಳೆ ಸೌಜನ್ಯ ತಾಯಿಗೆ ಡಿಕೆಶಿ ಸಾಂತ್ವನದ ಜೊತೆ ಬುದ್ಧಿಮಾತು ಹೇಳಿದ್ದಾರೆ.
“ಅಳಲು ಹೋಗಬೇಡಿ ಎಂದು ಸೌಜನ್ಯ ತಾಯಿಗೆ ಸಾಂತ್ವನ ಹೇಳಿದ ಡಿಕೆಶಿ, ಬೇರೆ ಯಾವುದೇ ರಾಜಕೀಯದವರ ಜೊತೆ ಸೇರಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಬಳಿಕ ಹೈಕೋರ್ಟ್ ಆರ್ಡರ್ ತರಿಸಿಕೊಡಿ ಪರಿಶೀಲಿಸ್ತೀನಿ, ಬೆಂಗಳೂರಿಗೆ ಬಂದು ಕೊಡಿ ಎಂದು ಡಿಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ನಾವೂ ಗೌಡರು, ನೀವು ಗೌಡರು, ನೀವು ಗೌಡ ಸಮುದಾಯಕ್ಕಾಗಿ ಇಲ್ಲಿಗೆ ಬಂದಿದ್ದೀರಿ, ನಮಗೆ ನೀವೇ ನ್ಯಾಯ ಕೊಡಿಸ್ಬೇಕು ಎಂದು ಡಿಸಿಎಂ ಡಿಕೆಶಿ ಮುಂದೆ ಜಾತಿ ದಾಳ ಉರುಳಿಸಿದ್ದಾರೆ.
Comments are closed.