Hindi vs Kannada: ಕನ್ನಡಿಗರಿಗೆ ಹಿಂದಿ ಕಲಿಯುವಂತೆ ಕಿರಿಕ್‌ ಮಾಡಿದ್ದ ಆಟೋ ಚಾಲಕ: ಇದೀಗ ಕನ್ನಡದಲ್ಲೇ ಕ್ಷಮಯಾಚನೆ

Share the Article

Hindi vs Kannada: ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ(Bengaluru) ಹಿಂದಿ ಭಾಷಿಕ(Hindi) ಗ್ರಾಹಕ, ಆಟೋ ಚಾಲಕ(Auto Driver) ಕನ್ನಡಿಗ ಕನ್ನಡದಲ್ಲಿ(Kannada) ಮಾತನಾಡಿದ್ದಕ್ಕೆ ಧಮ್ಕಿ ಹಾಕಿದ್ದ. ಇದು ಬಹು ದೊಡ್ಡ ವಾಕ್ಸಮರಕ್ಕೆ ನಾಂದಿ ಹಾಡಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಕೊನೆಗೂ ಹಿಂದಿಭಾಷಿಕ ಕನ್ನಡದಲ್ಲೇ ಕ್ಷಮೆ ಕೇಳಿದ್ದಾನೆ.

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಇದೀಗ ಹಿಂದಿ ಭಾಷಿಕ ಕನ್ನಡದಲ್ಲೇ ಮಾತನಾಡಿ ಕ್ಷಮೆ ಯಾಚಿಸಿದ್ದು, ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

‘ಮೊದಲನೆಯದಾಗಿ ಕರ್ನಾಟಕ ರಾಜ್ಯದ ಎಲ್ಲಾ ಕನ್ನಡ ಜನರಿಗೆ ನಾನು ಕ್ಷಮೆ ಕೋರುತ್ತೇನೆ. ನಾನು ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಈ ಸುಂದರ ನಗರದ ಭಾಗವಾಗಿದ್ದೇನೆ. ಈ ನಗರದ ಜೊತೆ ನನ್ನ ಸಾಕಷ್ಟು ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದೇನೆ. ಬೆಂಗಳೂರು ನನಗೆ ಜೀವನ ಕೂಡ ಕೊಟ್ಟಿದೆ.

ಹಾಗಾಗಿ ಈ ನಗರದ ಬಗ್ಗೆ ನನಗೆ ಅತೀವ ಗೌರವ ಇದೆ. ನಾನು ಇಲ್ಲಿದ್ದು ಕೊಂಡೇ ಹೊರಗಿನ ದೇಶದ ಕಂಪನಿಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿಂದಲೇ ನನಗೆ ಸಂಬಳ ಬರುತ್ತದೆ. ನನಗೆ ಈ ಬೆಂಗಳೂರು ತುಂಬಾ ಇಷ್ಟ. ಕನ್ನಡಿಗರಿಗೆ ನಾನಾಡಿರುವ ಮಾತುಗಳಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಈಗಾಗಲೇ ನಾನು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕ್ಷಮೆ ಕೋರಲು ನಿರ್ಧರಿಸಿದ್ದೇನೆ.
ಅಂದು ನಡೆದ ಒಂದೇ ಒಂದು ಸಣ್ಣ ಗಲಾಟೆ ವೇಳೆ ಆಕ್ರೋಶದಿಂದ ಆಟೋ ಚಾಲಕನೊಂದಿಗೆ ನಾನು ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಕ್ಷಮಿಸಿ’ ಎಂದು ಹೇಳಿದ್ದಾನೆ.

Comments are closed.