Huge Fish: ಬಲೆಗೆ ಬಿತ್ತು ಭರ್ಜರಿ ಗಾತ್ರದ ಕಾಟ್ಲಾ ಮೀನು!

Share the Article

Huge Fish: ತೆಲಂಗಾಣದ ಮೀನುಗಾರರೊಬ್ಬರಿಗೆ ಭರ್ಜರಿ ತೂಕದ ಕಾಟ್ಲಾ ಮೀನು ಬಲೆಗೆ ಬಿದ್ದಿದೆ. ಇದರ ತೂಕ ಬರೋಬ್ಬರಿ 32.5 ಕೆಜಿ. ಈ ಕುರಿತು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿಯ ಮೀನುಗಾರ ನರೇಶ್‌ ಬಲೆಗೇ ಬಿದ್ದಿದೆ ಈ ಬೃಹತ್‌ ಗಾತ್ರದ ಮೀನು.

ನರೇಶ್‌ ಎಂದಿನಂತರ ಮೀನುಗಾರಿಕೆಗೆ ತೆರಳಿದ್ದು. ಮಿಡ್‌ ಮಾನೇರು ಡ್ಯಾಮ್‌ ಬಳಿ ಎಂದಿನಂತೆ ಬೀಸಿದ ಬಲೆಯನ್ನು ಮೇಲಕ್ಕೆ ಎತ್ತೋಕೆ ಹೋದಾಗ, ಎತ್ತಲು ಸಾಧ್ಯವಾಗದೇ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮೆಲ್ಲಗೆ ಬಲೆಯನ್ನು ಮೇಲಕ್ಕೆ ಎತ್ತಿ ನೋಡಿದಾಗ ಬೃಹತ್‌ ದೈತ್ಯಾಕಾರದ ಮೀನನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.

ಬೃಹತ್‌ ಕಾಟ್ಲಾ ಮೀನನ್ನು ನೋಡಲು ಸ್ಥಳೀಯರು ನಾ ಮುಂದೆ ತಾ ಮುಂದೆ ಎಂದು ಬರುತ್ತಿದ್ದಾರೆ.

Comments are closed.