BSNL Plan: ಕಡಿಮೆ ಬೆಲೆಗೆ 60GB ಡೇಟಾದೊಂದಿಗೆ 5 ತಿಂಗಳ ವ್ಯಾಲಿಡಿಟಿ: ಬಿಎಸ್‌ಎನ್‌ಎಲ್ ಘೋಷಣೆ

Share the Article

BSNL Plan: ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಹೊಸ ಪ್ಯಾಕ್ ಒಂದನ್ನು ಪರಿಚಯಿಸಿದ್ದು, ಇದರಲ್ಲಿ ₹397ಕ್ಕೆ 150 ದಿನಗಳ ವ್ಯಾಲಿಡಿಟಿ(Validity) ಲಭಿಸಲಿದೆ. ಮಾತ್ರವಲ್ಲದೆ, ಮೊದಲ 30 ದಿನಗಳವರೆಗೆ ಅನಿಯಮಿತ ಕರೆ ಮತ್ತು ಪ್ರತಿದಿನ 2 GB ಇಂಟರ್ನೆಟ್ ಡೇಟಾ(Internet data) ಗ್ರಾಹಕರಿಗೆ ಸಿಗಲಿದೆ. 30 ದಿನಗಳ ನಂತರ ಗ್ರಾಹಕರು ಅವಶ್ಯಕತೆಗೆ ಅನುಗುಣವಾಗಿ ಡೇಟಾ ಮತ್ತು ಕರೆ ಸೌಲಭ್ಯವನ್ನು ಸೇರಿಸಿಕೊಳ್ಳಬಹುದು. ಈ ಯೋಜನೆಯಲ್ಲಿ 100 ಎಸ್‌ಎಂಎಸ್(SMS) ಸೌಲಭ್ಯವೂ ಸಿಗಲಿದೆ.

ಹೊಸ ಪ್ಲಾನ್ನಲ್ಲಿ ಏನೆಲ್ಲಾ ಇರಲಿದೆ?
• ಹೊಸ ಪ್ಲಾನ್ ರೀಚಾರ್ಜ್ನ ಒಟ್ಟು ಮೊತ್ತ 397 ರೂ
• ಅದರ ವ್ಯಾಲಿಡಿಟಿ 150 ದಿನ
• ಮೊದಲ 30 ದಿನಗಳವರೆಗೆ ಅನಿಯಮಿತ ಕರೆ
• ಮೊದಲ 30 ದಿನಗಳವರೆಗೆ ಪ್ರತಿದಿನ 2GB ಡೇಟಾ
• ಒಂದು ತಿಂಗಳವರೆಗೆ ಒಟ್ಟು 60GB ಡೇಟಾ ಲಭ್ಯ
• 30 ದಿನಗಳ ನಂತರ ಅವಶ್ಯಕತೆಗೆ ಅನುಗುಣವಾಗಿ ಡೇಟಾ, ಕರೆ ಸೌಲಭ್ಯ
• ಈ ಯೋಜನೆಯಲ್ಲಿ 100 ಉಚಿತ SMS ಸೌಲಭ್ಯ
ಈ ಯೋಜನೆಯನ್ನು ಯಾವುದೇ ಖಾಸಗಿ ಟೆಲಿಕಾಂ ಕಂಪನಿ ನೀಡುತ್ತಿಲ್ಲ. ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ತನ್ನತ್ತ ಸೆಳೆಯಲು ಈ ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

Comments are closed.