Ricky Rai: ನನ್ನ ಮೇಲೆ ಅಟ್ಯಾಕ್‌ ಮಾಡಿದ್ದು ಅವರೇ…ಪೊಲೀಸರಿಗೆ ರಿಕ್ಕಿ ರೈ ಮಹತ್ವದ ಮಾಹಿತಿ!

Share the Article

Ricky Rai: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಕೇಸ್‌ ಕುರಿತಂತೆ ರಿಕ್ಕಿ ರೈ ಪೊಲೀಸರ ಮುಂದೆ ಕೆಲವೊಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾದ ಆರೋಪಿಗಳಾದ ರಾಕೇಶ್‌ ಮಲ್ಲಿ, ಅನುರಾಧ, ನಿತೇಶ್‌ ಶೆಟ್ಟಿ, ವೈದ್ಯನಾಥನ್‌ ಇವರೇ ನನ್ನ ಮೇಲೆ ಅಟ್ಯಾಕ್‌ ಮಾಡಿದ್ದು ಎಂಬ ಹೇಳಿಕೆ ನೀಡಿರುವುದಾಗಿ ನ್ಯೂಸ್ಟ್‌ ಫಸ್ಟ್‌ ವರದಿ ಮಾಡಿದೆ. ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ ಎಂದಿದ್ದಾರೆ. ನಾನು ರಷ್ಯಾದಲ್ಲಿದ್ದೆ, ಜಾಮೀನು ವಿವಾದ ಸಂಬಂಧ ಕೋರ್ಟ್‌ನಲ್ಲಿ ಕೇಸ್‌ ಇತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿ ವಾಸವಿರುತ್ತಿದ್ದೆ. 12 ಗಂಟೆಗೆ ಎರಡು ಕಾಲ್ ಬಂದಿದ್ದು ಹಾಗಾಗಿ ಹೊರಟಿದೆ. ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆಗೆ ಬಂದಾಗ ಅಟ್ಯಾಕ್ ಮಾಡಲಾಗಿದೆ. ನನ್ನ ಕೈ ಹಾಗೂ ಮೂಗಿಗೆ ಗುಂಡು ತಗಲಿದೆ. ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದ್ರು. ರಾಕೇಶ್ ಮಲ್ಲಿ ಹಾಗೂ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ನ್ಯೂಸ್‌ ಫಸ್ಟ್‌ ವರದಿ ಮಾಡಿದೆ.

Comments are closed.