Murder: ಮದ್ಯ ಕುಡಿಯಲು ಹಣ ಕೊಡದ ತಾಯಿಯನ್ನು ಬರ್ಬರವಾಗಿ ಕೊಂದ ಮಗ!

Murder: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. ಮಗ ಸ್ವಾಮಿ (40) ಎಂಬಾತ ತಾಯಿ ಜಯಮ್ಮ (60 ರವರನ್ನು ಕೊಲೆ (Murder) ಮಾಡಿರುವ ಆರೋಪಿಯಾಗಿದ್ದಾನೆ.

ಗಂಡನಿಗೆ ಹುಷಾರಿಲ್ಲದ ಕಾರಣ ಜಯಮ್ಮ 90 ಸಾವಿರ ರೂ ಹಣವನ್ನು ಕೂಡಿಟ್ಟಿದ್ದರು. ಇದೇ ಹಣ ನೀಡುವಂತೆ ಮಗ ಪದೇ ಪದೇ ಪೀಡಿಸುತ್ತಿದ್ದ. ಅತ್ತ ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಇತ್ತ ಮಗ ತನ್ನ ತಾಯಿಯನ್ನು ಹೊಡೆದು ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.