SSLC: ನನ್ನ ಲವ್ ನಿಮ್ಮ ಕೈಯಲ್ಲಿದೆ, ಪಾಸ್ ಮಾಡಿ: SSLC ಉತ್ತರ ಪತ್ರಿಕೆಯಲ್ಲಿ 500 ರೂ ನೀಡಿದ ವಿದ್ಯಾರ್ಥಿ!

SSLC: ಎಸ್ ಎಸ್ ಎಲ್ ಸಿ (SSLC) ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬ ನನ್ನ ಲವರ್ ಎಸ್ ಎಸ್ ಎಲ್ ಸಿ ಪಾಸ್ ಆದ್ರೆ ಮಾತ್ರ ಲವ್ ಮಾಡ್ತೀನಿ ಅಂತ ಹೇಳಿದ್ದಾಳೆ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ. ಪ್ಲೀಸ್ ಪಾಸ್ ಮಾಡಿ ಅಂತ 500 ರೂಪಾಯಿ ನೋಟು ಇರಿಸಿರೋ ವಿಚಿತ್ರ ಘಟನೆ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಇಂತದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಎಸ್ ಎಸ್ ಎಲ್ ಸಿ ಉತ್ತರ ಪರೀಕ್ಷೆಯ ಮೌಲ್ಯ ಮಾಪನದ ವೇಳೆಯಲ್ಲಿ “ಸರ್ ರೀ, ಮೇಡಂ ರೀ, ನಿಮ್ಮ ಕಾಲ ಬೀಳ್ತೀನಿ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರ ಅಷ್ಟೇ ಲವ್ ಮಾಡತ್ತನೆ ಅಂದಾಳ ರೀ ನನ್ನ ಹುಡುಗಿ. ಈ 500 ನಿವ ಚಾ ಕುಡಿರಿ ಸರ್ ರೀ. ನನ್ನ ಪಾಸ್ ಮಾಡರಿ ಅಂತ ಕೋರಿಕೊಂಡಿದ್ದಾನೆ.
Comments are closed.