Marriage: ತಂದೆಯ ಶವದ ಮುಂದೆ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ!

Share the Article

Marriage: ತಂದೆಯ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ, ತಂದೆಯ ಶವದ ಮುಂದೆ ತಾನೆ ಪ್ರೀತಿಸಿದ್ದ ಯುವತಿಗೆ ತಾಳಿ ಕಟ್ಟಿದ ಅಪರೂಪದ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

 ಇದನ್ನೂ ಓದಿ:  ಮುಸ್ಲಿಮರ ಜನಸಂಖ್ಯೆ 30 ವರ್ಷಗಳಲ್ಲಿ ಶೇ.90ರಷ್ಟು ಏರಿಕೆ

ಕವನ ಗ್ರಾಮ ನಿವಾಸಿ ಹಾಗೂ ರೈಲ್ವೆ ಇಲಾಖೆಯಿಂದ ನಿವೃತ್ತರಾಗಿದ್ದ ಸೆಲ್ವರಾಜ್ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಮಗ ಅಪ್ಪು, ವಿರುದಾಚಲಂ ಕೌಂಜಿಯಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದು, ವಿಜಯಶಾಂತಿ ಎಂಬ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮುಂದೆ ಸ್ಥಿರ ಜೀವನ ಕಟ್ಟಿಕೊಂಡ ಬಳಿಕ ಮದುವೆಯಾಗೋ ನಿರ್ಧಾರದಲ್ಲಿದ್ದರು. ಅಷ್ಟರಲ್ಲಿ ತಂದೆ ಸೆಲ್ವರಾಜ್ ಮೃತ ಪಟ್ಟಿದ್ದರು. ಆದರೆ ತಂದೆಯ ಮೃತದೇಹದ ಮುಂದೆ ಅವರ ಆಶೀರ್ವಾದವನ್ನು ಪಡೆಯಬೇಕೆಂಬ ಉದ್ದೇಶದಿಂದ, ಅಪ್ಪು ವಿಜಯಶಾಂತಿಯ ಒಪ್ಪಿಗೆಯೊಂದಿಗೆ ಸ್ಥಳದಲ್ಲಿಯೇ ಮದುವೆಯಾಗಿದ್ದಾನೆ (Marriage) . ಮದುವೆಗೆ ಹುಡುಗಿಯ ಪರಿವಾರದಿಂದ ಯಾರೂ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  ದಕ್ಷಿಣ ಕನ್ನಡ : ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧೆ ; ಪಕ್ಷ ವಿರೋಧಿ ಚಟುವಟಿಕೆ ಎಂದು ಇಬ್ಬರು ಬಿಜೆಪಿ ಮುಖಂಡರ ಉಚ್ಛಾಟನೆ !!

Comments are closed.