Karwar: ವಾಯುವಿಹಾರಕ್ಕೆಂದು ಹೋಗಿದ್ದ ನಗರಸಭೆ ಮಾಜಿ ಸದಸ್ಯನ ಭೀಕರ ಕೊಲೆ!

Share the Article

Council Member: ನಗರಸಭೆ ಮಾಜಿ ಸದಸ್ಯನನ್ನು ಕೊಲೆ ಮಾಡಿ ಪರಾರಿಯಾಗಿರುವಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಎಸ್‌ಎನ್‌ಎಲ್‌ ಕಚೇರಿ ಬಳಿ ನಡೆದಿದೆ.

ಸತೀಶ್‌ ಕೋಳಂಕರ್‌ ಕೊಲೆಯಾದ ನಗರಸಭೆ ಮಾಜಿ ಸದಸ್ಯ.

ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದ ವೇಳೆ ಚಾಕು ಇರಿಯಲಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸತೀಶ್‌ ಅವರನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ಕೊಲೆಯಾದ ವ್ಯಕ್ತಿ ಒಬ್ಬ ರೌಡಿಶೀಟರ್‌ ಆಗಿದ್ದ. ಮಾಜಿ ನಗರಸಭಾ ಸದಸ್ಯ ಕೂಡಾ ಹೌದು. ಸತೀಶ್‌ ಕೋಳಂಕರ್‌ ಮೇಲೆ ಒಂಭತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಸತೀಶ್‌ ಕೊಳಂಕರ್‌ ಕಾರವಾರ ತಾಲೂಕಿನ ಚಿತ್ತಾಕುಲ ನಿವಾಸಿ ಎಂದು ಎಸ್‌.ಪಿ.ಎಂ ನಾರಾಯಣ್‌ ಮಾಧ್ಯಮದವರೊಂದಿಗೆ ಹೇಳಿದರು.

Comments are closed.