Italy: ಜೈಲಿನಲ್ಲಿ ಕೈದಿಗಳಿಗಾಗಿ ಸೆ*ಕ್ಸ್ ರೂಮ್ ಓಪನ್!!

Share the Article

Italy: ಇಟಲಿ ಸರ್ಕಾರ ಕೈದಿಗಳಿಗಾಗಿ ಜೈಲಿನಲ್ಲೇ ಸೆ*ಕ್ಸ್ ರೂಂ (physical contact Room) ತೆರೆದಿದೆ. ಜೈಲು ಕೈದಿಗಳಿಗೆ ಖಾಸಗಿ ಭೇಟಿ ಮತ್ತು ಏಕಾಂತ ಸಾಂವಿಧಾನಿಕ ಹಕ್ಕು ಎಂಬ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ಸರ್ಕಾರವು ಈ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಹೌದು, ಇನ್ನು ಜೈಲಿನಲ್ಲಿರುವ ಕೈದಿಗಳಿಗೂ ಖಾಸಗಿತನ ಇರಬೇಕು ಎಂದು ಈ ಹಿಂದೆ ಇಟಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಜನವರಿ 2024 ರಲ್ಲಿ ಪ್ರಕಟವಾದ ತೀರ್ಪಿನಲ್ಲಿ, ನ್ಯಾಯಾಲಯವು ಕೈದಿಗಳು ಸಂಗಾತಿಗಳು ಅಥವಾ ದೀರ್ಘಾವಧಿಯ ಪಾಲುದಾರರೊಂದಿಗೆ ಖಾಸಗಿ ಮೀಟಿಂಗ್ ಗಳನ್ನು ನಡೆಸುವ ಹಕ್ಕನ್ನು ಹೊಂದಿರಬೇಕು ಮತ್ತು ಅವರ ಮೇಲ್ನಿಚಾರಣೆಗೆ ಅಲ್ಲಿ ಯಾವುದೇ ಜೈಲು ಸಿಬ್ಬಂದಿ ಇರಬಾರದು ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿ ಇಟಲಿಯ ಮೊದಲ ಕೈದಿಗಳ ಲೈಂಗಿಕ ಕೊಠಡಿ (physical contact Room) ಶುಕ್ರವಾರ ಕಾರ್ಯರೂಪಕ್ಕೆ ಬಂದಿದೆ. ಕೈದಿಗಳ ನೋಡಲು ಬರುವ ಸಂಗಾತಿಗಳು ಅಥವಾ ಹೊರಗಿನಿಂದ ಭೇಟಿ ನೀಡುವ ಪಾಲುದಾರರೊಂದಿಗೆ ಕೈದಿಗಳು “ಆಪ್ತ ಸಭೆಗಳನ್ನು” ನಡೆಸಲು ಇಟಲಿ ಸರ್ಕಾರ ಅನುವು ಮಾಡಿ ಕೊಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉಂಬ್ರಿಯಾದ ಕೈದಿಗಳ ಹಕ್ಕುಗಳ ಒಂಬುಡ್ಸ್‌ಮನ್ ಗೈಸೆಪ್ಪೆ ಕ್ಯಾಫೊರಿಯೊ ಅವರು, ‘ಎಲ್ಲವೂ ಸುಗಮವಾಗಿ ನಡೆದ ಕಾರಣ ನಮಗೆ ಸಂತೋಷವಾಗಿದೆ. ಆದರೆ ಈ ಸೆಕ್ಸ್ ರೂಂಗೆ ಬರುವ ವ್ಯಕ್ತಿಗಳ ಖಾಸಗಿ ತನ ರಕ್ಷಿಸಲು ಗರಿಷ್ಠ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಒಂದು ರೀತಿಯ ಪ್ರಯೋಗ ಚೆನ್ನಾಗಿ ನಡೆಯಿತು ಎಂದು ನಾವು ಹೇಳಬಹುದು ಮತ್ತು ಮುಂದಿನ ಕೆಲವು ದಿನಗಳಲ್ಲಿ ಇತರೆ ಸಭೆಗಳು ಇರುತ್ತವೆ ಎಂದು ಹೇಳಿದ್ದಾರೆ.

Comments are closed.