Elopement Case: ಮಗಳ ಮಾವನ ಜೊತೆ ಎಸ್ಕೇಪ್‌ ಆದ ಅತ್ತೆ!

Share the Article

Viral News: ಇತ್ತೀಚೆಗಷ್ಟೇ ತನ್ನ ಭಾವಿ ಅಳಿಯನ ಜೊತೆ ಮಹಿಳೆಯೊಬ್ಬಳು ಓಡಿ ಹೋದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಇದೀಗ ಮಹಿಳೆಯೊಬ್ಬಳು ತನ್ನ ಮಗಳ ಮಾವನ ಜೊತೆ (ಮಗಳ ಗಂಡನ ಅಪ್ಪ) ಓಡಿ ಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ.

43 ವರ್ಷದ ಮಮತಾ ಎಂಬ ಮಹಿಳೆ ಓಡಿ ಹೋದ ಮಹಿಳೆ. ಮಾವ ಶೈಲೇಂದ್ರ ಅಲಿಯಾಸ್‌ ಬಿಲ್ಲು ಎಂದು ಗುರುತಿಸಲಾಗಿದೆ.

ಮಹಿಳೆಯ ಗಂಡ ಟ್ರಕ್‌ ಚಾಲಕನಾಗಿದ್ದು, ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದ. ಈತನ ಹೆಸರು ಸುನೀಲ್‌ ಕುಮಾರ್‌. ಈತ ಇಲ್ಲದೇ ಇರುವ ಸಮಯದಲ್ಲಿ ಪತ್ನಿ ಮಮತಾ ತಮ್ಮ ಮಗಳ ಮಾವನನ್ನು ಮನಗೆ ಬರಲು ಹೇಳುತ್ತಿದ್ದರು. ಹೀಗಾಗಿ ತನ್ನ ಮಗನ ಅತ್ತೆ ಮನೆಗೆ ಶೈಲೇಂದ್ರ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇದರಿಂದ ಇವರಿಬ್ಬರ ಮಧ್ಯೆ ಪ್ರೇಮ ಉಂಟಾಗಿದೆ. ಹೀಗಾಗಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.

ಮಮತಾಗೆ ನಾಲ್ವರು ಮಕ್ಕಳಿದ್ದು, ಒಬ್ಬ ಮಗಳಿಗೆ 2022 ರಲ್ಲಿ ಮದುವೆಯಾಗಿದೆ. ಮಹಿಳೆ ಮನೆಯಿಂದ ಓಡಿ ಹೋಗುವಾಗ ಆಭರಣ, ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿ ಸುನೀಲ್‌ ಕುಮಾರ್‌ ಹೇಳಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.