Ricky Rai: ರಿಕ್ಕಿ ರೈ ಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ!

D K Shivakumar: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿರುವ ಚಿಕಿತ್ಸೆ ಪಡೆಯುತ್ತಿದ್ದು, ರಿಕ್ಕಿ ರೈ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಚಾರಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದಿರುವ ಡಿಕೆಶಿ, ಆರೋಪಿಗಳು ಯಾರೇ ಆಗಿದ್ದರೂ ಪೊಲೀಸರು ಪತ್ತೆ ಹಚ್ಚುತ್ತಾರೆ. ನಾನು ಗೃಹ ಇಲಾಖೆ ಜೊತೆಗೆ ಪ್ರಕರಣದ ಕುರಿತು ಮಾತನಾಡುತ್ತೇನೆ. ನೀನು ಆರೋಗ್ಯದ ಕಡೆ ಗಮನ ಕೊಡು ಎಂದು ಸಾಂತ್ವನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.
ರಿಕ್ಕಿ ರೈ ಡಿಸಿಎಂ ಆರೋಗ್ಯ ವಿಚಾರಿಸಿರುವುದು ಆತ್ಮಬಲ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
Comments are closed.