Bangalore: ಮಂಗಳಮುಖಿಯ ಬರ್ಬರ ಹತ್ಯೆ!

Share the Article

Bangalore: ಬೆಂಗಳೂರಿನಲ್ಲಿ ಮಂಗಳಮುಖಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೆ.ಆರ್‌.ಪುರಂ ನಲ್ಲಿ ನಡೆದಿದೆ.

ತನುಶ್ರೀ (40) ಹತ್ಯೆಯಾದ ಮಂಗಳಮುಖಿ.

ಕರವೇ ಕಾರ್ಯಕರ್ತೆಯಾಗಿದ್ದ ತನುಶ್ರೀ, ಸಂಗಮ ಎನ್ನುವ ಎನ್‌ಜಿಒ ನಡೆಸುತ್ತಿದ್ದರು. ಜಗನ್ನಾಥ ಎಂಬುವವರನ್ನು ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಹತ್ಯೆ ನಂತರ ಪತಿ ಜಗನ್ನಾಥ ಮತ್ತು ಮನೆ ಕೆಲಸದವಳು ಪರಾರಿಯಾಗಿದ್ದಾರೆ.

ತನುಶ್ರೀ ಹತ್ಯೆ ಮೂರು ದಿನಗಳ ಹಿಂದೆಯೇ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಕೆ.ಆರ್.ಪುರಂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments are closed.