Bengaluru: ಅಪ್ರಾಪ್ತರ ಪ್ರೇಮದಲ್ಲಿ ಹುಟ್ಟಿದ ಶಿಶು ಸೇರಿದ್ದು ಕಸದ ಬುಟ್ಟಿಗೆ!

Share the Article

Bengaluru: ಹದಿಹರೆಯದ ಇಬ್ಬರು ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ.

ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿದ್ದಾರೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರುವ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಯಲಹಂಕದ ಗಾಂಧಿನಗರ ಏರಿಯಾದಲ್ಲಿ ಸೈಕಲ್ ನಲ್ಲಿ ಬಂದಿದ್ದ ವ್ಯಕ್ತಿ ಕಸದ ರಾಶಿಯಲ್ಲಿ ಕವರ್ ಬಿಸಾಕಿ ಹೋಗಿದ್ದ. ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಯಲ್ಲಿ ಈ ಕಸ ಬಿಸಾಡಿ ಎಂದು ಯುವತಿ ಶಿಶುವಿದ್ದ ಕವರ್ ಅನ್ನು ಕೊಟ್ಟಿದ್ದಾಳೆ. ಆಗ ವೃದ್ಧ ಅದರ ಅರಿವಿಲ್ಲದೇ ಆ ಕವರ್​ ಅನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಬಳಿಕ ಪೌರಕಾರ್ಮಿಕರು ಬೆಳಗ್ಗೆ ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್ ಮಾಡಿಸಿದ್ದಾರೆ. ಆಗ ಪೊಲೀಸರಿಗೆ CCTVಯಲ್ಲಿ ಸೈಕಲ್​ನಲ್ಲಿ ವೃದ್ಧನ ಗುರುತು ಪತ್ತೆಯಾಗಿದೆ. ಆಗ ಕವರ್​ನಲ್ಲಿದ್ದ ಶಿಶುವಿನ ಶವ ಎಸೆದ ವೃದ್ಧನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ. ಅಪ್ರಾಪ್ತರ ಲವ್​ ಸ್ಟೋರಿ, ಶಿಶು ಸಾವಿನ ಸತ್ಯ ಬೆಳಕಿಗೆ ಬಂದಿದೆ.

Comments are closed.