Ajith Kumar: ಮತ್ತೆ ಕಾರು ಅಪಘಾತಕ್ಕೊಳಗಾದ ನಟ ಅಜಿತ್ ಕುಮಾರ್; ವಿಡಿಯೋ ವೈರಲ್

Ajith Kumar: ಅಜಿತ್ ಕುಮಾರ್ ಅವರು ರೇಸ್ ಟ್ರ್ಯಾಕ್‌ನಲ್ಲಿ ಓಡಿಸುತ್ತಿದ್ದ ಕಾರು ಮತ್ತೆ ಅಪಘಾತಕ್ಕೆ ಒಳಗಾಗಿದೆ. ಬೆಲ್ಜಿಯಂನಲ್ಲಿ ನಡೆದ ಈ ಅಪಘಾತದಲ್ಲಿ ಅಜಿತ್ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ರೀತಿ ನಟನಿಗೆ ಆಗುತ್ತಿರುವುದು ಮೂರನೇ ಬಾರಿ.
ಅಜಿತ್ ಕುಮಾರ್ ತಮ್ಮದೇ ಕಾರ್ ರೇಸಿಂಗ್ ಟೀಂ ಹೊಂದಿದ್ದಾರೆ. ತಮ್ಮ ತಂಡದ ಜೊತೆಗೆ ಅವರು ಹೆಚ್ಚೆಚ್ಚು ಕಾರ್ ರೇಸ್ ಪ್ರ್ಯಾಕ್ಟೀಸ್ ಮಾಡುತ್ತಿದ್ದು, ಎಪ್ರಿಲ್ 19 ರಂದು ತರಬೇತಿ ಪಡೆಯುತ್ತಿರುವಾಗ ಕಾರು ಹೋಗಿ ಕಟ್ಟೆಯೊಂದಕ್ಕೆ ಗುದ್ದಿದೆ. ಮಳೆಯ ಕಾರಣಕ್ಕೆ ಟ್ರ್ಯಾಕ್ ಒದ್ದೆಯಾಗಿತ್ತು. ಅಜಿತ್ ಕಾರು ಈ ಸಂದರ್ಭದಲ್ಲಿ ನಿಯಂತ್ರಣಕ್ಕೆ ದೊರಕಿಲ್ಲ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
https://twitter.com/i/status/1913485414884843983
ನಟ ಅಜಿತ್ ಕಾರು ಅಪಘಾತಕ್ಕೊಳಗಾಗುವುದು ಇದು ಮೂರನೇ ಬಾರಿ. ಮೊದಲಿಗೆ ಫೆ.23 ರಂದು ಸ್ಪೇನ್‌ನಲ್ಲಿ, ನಂತರ ದುಬೈನಲ್ಲಿ ನಡೆಯಿತು. ಅಭಿಮಾನಿಗಳು ಪದೇ ಪದೇ ಆಗುವ ಈ ಘಟನೆಯಿಂದ ಆತಂಕಗೊಂಡಿದ್ದು, ಅಜಿತ್ ಅವರು ಹೆಚ್ಚು ಜಾಗೂರಕರಾಗಬೇಕು ಎಂದು ಕೋರಿಕೊಂಡಿದ್ದಾರೆ.
Comments are closed.