Ujire: ಉಜಿರೆಗೆ ಬಂದ ಪುನೀತ್ ಕೆರೆಹಳ್ಳಿ; ವಾಪಸ್ ಕಳುಹಿಸಿದ ಪೊಲೀಸರು!

Ujire: ಇಂದು ಪುನೀತ್ ಕೆರೆಹಳ್ಳಿ ಉಜಿರೆಗೆ ಬಂದಿದ್ದು, ಈ ಸಮಯದಲ್ಲಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾದ ಘಟನೆ ನಡೆಯಿತು.
ಉಜಿರೆಗೆ ಬಂದ ಪುನೀತ್ ಕೆರೆಹಳ್ಳಿಯನ್ನು ಜಿಲ್ಲಾಧಿಕಾರಿ ಆದೇಶದ ಪ್ರಕಾರ, ತಡೆದು ವಾಪಾಸ್ ಹೋಗುವಂತೆ ಮನವಿ ಮಾಡಿದರು. ಈ ಸಮಯದಲ್ಲಿ ಸ್ಥಳಕ್ಕೆ ಬಂದ ಗುಂಪಿನಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಪೊಲೀಸರು ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ ಎಂದು ವರದಿಯಾಗಿದೆ.
Comments are closed.