Bappanadu: ಬಪ್ಪನಾಡಿನ ಬ್ರಹ್ಮರಥ ಕುಸಿತದ ಕಾರಣ ಬಹಿರಂಗ !!

Share the Article

Bappanadu : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಬಪ್ಪನಾಡುನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವ ನಡೆಯುತ್ತಿದ್ದಾಗ ಅವಘಡವೊಂದು ಸಂಭವಿಸಿದ್ದು, ಅಮ್ಮನವರ ರಥದ ಮೇಲಿನ ಭಾಗ ಕುಸಿತ ಕಂಡಿದೆ. ಇದೀಗ ರಥ ಕುಸಿಯಲು ಕಾರಣ ಏನು ಎಂಬುದು ತಿಳಿದುಬಂದಿದೆ.

ಅಂದಹಾಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ರಥದ ಚಕ್ರದ ಆಯಕ್ಸಲ್ ತುಂಡಾಗಿ ಈ ಅವಘಡ ಸಂಭವಿಸಿದೆ. ರಥದ ಮುಂಭಾಗದ ಚಕ್ರ ಸಂಪೂರ್ಣವಾಗಿ ಕಿತ್ತು ಬಂದಿದೆ. ಮುಂಭಾಗದ ಎರಡು ಚಕ್ರಕ್ಕೆ ಅಳವಡಿಸಿದ್ದ ಮರದ ಆಯಕ್ಸಲ್ ತುಂಡಾದರಿಂದ ಆಯತಪ್ಪಿ ರಥದ ಗೋಪುರ ಬಿದ್ದಿದೆ. ರಥದ ಮೇಲ್ಬಾಗ ಬೀಳುತ್ತಿದ್ದಂತೆ ಭಕ್ತರು ಓಡಿ ಹೋದ ಹಿನ್ನೆಲೆ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.

ಅಲ್ಲದೆ ರಥದ ಚಕ್ರದ ಬಳಿ ಗೆದ್ದಲು ಹಿಡಿದು ಶಿಥಿಲಗೊಂಡರೂ ನಿರ್ಲಕ್ಷ್ಯ ತೋರಲಾಯ್ತಾ? ಎಂಬ ಪ್ರಶ್ನೆ ಎದ್ದಿದೆ. ರಥದ ಚಕ್ರದ ಬಳಿಯ ಮರದ ಆಕ್ಸಲ್ ಗೆ ಗೆದ್ದಲು ಹಿಡಿದು ಶಿಥಿಲಗೊಂಡಿದೆ. ಮಳೆಯ ನೀರು ಬಿದ್ದು ಶಿಥಿಲಗೊಂಡಿರೋ ಸಾಧ್ಯತೆ. ಹೀಗಿದ್ರೂ ಫಿಟ್ ನೆಸ್ ಟೆಸ್ಟ್ ಮಾಡದೇ ಆಡಳಿತ ಮಂಡಳಿ ರಥೋತ್ಸವ ಮಾಡಿದೆ. ರಥ ಕಟ್ಟಿ ತಡರಾತ್ರಿ ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಮಾಡುವಾಗ ಈ ದುರ್ಘಟನೆ ನಡೆದಿದೆ. ಸಂಪೂರ್ಣ ಶಿಥಿಲಗೊಂಡಿದ್ದರೂ ಪರಿಶೀಲನೆ ಮಾಡದಿರುವುದುದೇ ಈ ಅವಘಡಕ್ಕೆ ಕಾರಣವಾಗಿದೆ.

Comments are closed.