Puttur: ಪುತ್ತೂರು: ಧ್ವಜಾವರೋಹಣದ ಮೂಲಕ ಹತ್ತೂರ ಒಡೆಯನ ಜಾತ್ರೋತ್ಸವ ಸಂಪನ್ನ!

Puttur: ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರು (Puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎ.10 ರಂದು ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು. 9 ದಿನಗಳ ಜಾತ್ರೆ ಕಾರ್ಯಕ್ರಮ ಸರಾಗವಾಗಿ ನಡೆದಿದ್ದು ಇಂದು (ಎ.19) ರಂದು ಬೆಳಿಗ್ಗೆ ಗಂಟೆ 10.40ಕ್ಕೆ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಎ.17ರಂದು ಬ್ರಹ್ಮರಥೋತ್ಸವ ನಡೆದ ಬಳಿಕ ಎ. 18ರಂದು ಸಂಜೆ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಅವಕೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ದಕ್ಕೂ ಹಲವು ಕಡೆಗಳಲ್ಲಿ ಕಟ್ಟೆ ಪೂಜೆ ಮತ್ತು ಅಂಗಡಿ, ಮನೆಗಳಿಂದ ಆರತಿ ಸ್ವೀಕರಿಸಿ ಎ.19ರಂದು ಬೆಳಿಗ್ಗೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಅಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ, ಬಳಿಕ ಕುಮಾರಧಾರ ಹೊಳೆಯ ತಟದಲ್ಲಿರುವ ಕಟ್ಟೆಯಲ್ಲಿ ಪುಷ್ಪ ಕನ್ನಡಿ ತೆರವು ಮಾಡಿ ಕುಮಾರಧಾರ ನದಿಯಲ್ಲಿ ಅವಭ್ರತ ಸ್ನಾನಕ್ಕೆ ಇಳಿದರು.
ಅಭಿಷೇಕಾದಿ ಸ್ನಾನ ಮುಗಿಸಿ ಅಲ್ಲಿಂದ ನೇರ ದೇವಳಕ್ಕೆ ಆಗಮಿಸಿ, ಧ್ವಜಾವರೋಹಣ ಮೂಲಕ ಜಾತ್ರೆ ಸಂಪನ್ನಗೊಂಡಿತು. ಈ ವೇಳೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
Comments are closed.