Mulky: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ಏಕಾಏಕಿ ಕುಸಿದ ತೇರಿನ ಮೇಲ್ಭಾಗ!

Dakshina Kannada (Mulky): ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ರಥೋತ್ಸವದ ವೇಳೆ ದೇವರಿದ್ದ ತೇರಿನ ಮೇಲ್ಭಾಗವು ಏಕಾಏಕಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ರಾತ್ರಿ 1.40 ರಿಂದ 2 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ. ತೇರಿನ ಮೇಲ್ಭಾಗವು ಕುಸಿಯುವ ವೇಳೆ ಅರ್ಚಕರು ತೇರಿನಲ್ಲಿಯೇ ಇದ್ದರು. ಆದರೆ ಯಾವುದೇ ಅಪಾಯ ಸಂಭವಿಸದೆ ಅವರು ಸುರಕ್ಷಿತರಾಗಿ ಪಾರಾಗಿದ್ದಾರೆ.
ಅಲ್ಲಿ ನೆರೆದಿದ್ದ ಭಕ್ತರು ತೇರು ಬಿದ್ದ ದೃಶ್ಯವನ್ನು ಕಂಡು ಆತಂಕಗೊಂಡಿದ್ದರು. ಆದರೆ ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುವ ಕುರಿತು ವರದಿಯಾಗಿದೆ. ತೇರು ಬಿದ್ದ ನಂತರ ದೇವರ ಉತ್ಸವ ಮತ್ತೆ ಮುಂದುವರಿಸಲು ತೀರ್ಮಾನ ಮಾಡಲಾಯಿತು. ಚಂದ್ರಮಂಡಲ ತೇರಿನಲ್ಲಿ ಉತ್ಸವ ಮುಂದುವರೆದಿದೆ.
ಈ ಘಟನೆಗೆ ಕಾರಣವೇನೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲ.
Comments are closed.