CM Siddaramaiah: ಶಾಲೆ-ಕಾಲೇಜಿನಲ್ಲಿ ಜಾತಿ ತಾರತಮ್ಯ ನಿವಾರಣೆ; ಶೀಘ್ರ ವೇಮುಲ ಕಾಯ್ದೆ-ಸಿಎಂ ಘೋಷಣೆ

CM Siddaramaiah: ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ನಿವಾರಣೆ ಮಾಡಲು ಕರ್ನಾಟಕದಲ್ಲಿ ʼರೋಹಿತ್ ವೇಮುಲ ಕಾಯ್ದೆʼ ಜಾರಿಗೆ ತರುವಂತೆ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ʼಆದಷ್ಟು ಬೇಗ ಈ ಕಾಯ್ದೆ ಜಾರಿಗೆ ತರುತ್ತೇವೆʼ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಏ.16ರಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ‘ಲಕ್ಷಾಂತರ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಮಕ್ಕಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂದಿಗೂ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದು ನಾಚಿಕೆಗೇಡಿನ ವಿಚಾರ. ತಾರಮತ್ಯದಿಂದಾಗಿ ರೋಹಿತ್ ವೇಮುಲ, ಪಾಯಲ್ ತಾಡ್ವಿ ಮತ್ತು ದರ್ಶನ್ ಸೋಲಂಕಿ ಅವರಂಥ ಪ್ರತಿಭಾವಂತರ ಹತ್ಯೆಯನ್ನು ಒಪ್ಪಲು ಸಾಧ್ಯವಿಲ್ಲ. ಇಂಥದ್ದಕ್ಕೆಲ್ಲ ಇದೀಗ ಅಂತ್ಯ ಹಾಡುವ ಕಾಲ ಬಂದಿದೆ. ಇದಕ್ಕಾಗಿ ರೋಹಿಲ್ ವೇಮುಲಾ ಕಾಯ್ದೆ ಜಾರಿಗೆ ತರಬೇಕೆಂದು ನಾನು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
Comments are closed.