Bappanadu: ಬಪ್ಪನಾಡು ರಥ ಕುಸಿತ ಪ್ರಕರಣ – ಮೇಲಿದ್ದ ಅರ್ಚಕರನ್ನು ಕಾಪಾಡಿದ ದುರ್ಗಾಪರಮೇಶ್ವರಿ, ವಿಡಿಯೋ ವೈರಲ್ !!

Share the Article

Bappanadu : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಬಪ್ಪನಾಡುನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವ ನಡೆಯುತ್ತಿದ್ದಾಗ ಅವಘಡವೊಂದು ಸಂಭವಿಸಿದ್ದು, ಅಮ್ಮನವರ ರಥದ ಮೇಲಿನ ಭಾಗ ಕುಸಿತ ಕಂಡಿದೆ. ಈ ವೇಳೆ ಮೇಲಿದ್ದ ಅರ್ಚಕರನ್ನು ತಾಯಿ ದುರ್ಗಾಪರಮೇಶ್ವರಿಯೇ ಕಾಪಾಡಿದ್ದಾಳೆ ಎನ್ನಲಾಗುತ್ತಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಪ್ಪನಾಡಿನ ದುರ್ಗೆಯನ್ನು ಅತ್ಯಂತ ಶಕ್ತಿಶಾಲೀ ದೇವಿ ಎಂದೇ ಸ್ಥಳೀಯರು ನಂಬುತ್ತಾರೆ. ಈ ದೇವಿಯ ಜಾತ್ರೆಯ ರಥೋತ್ಸವದ ವೇಳೆ ಭಾರೀ ಅನಾಹುತ ಸಂಭವಿಸುವುದರಲ್ಲಿತ್ತು. ರಥ ಸಾಗುವಾಗ ಮೇಲ್ಭಾಗ ಇದ್ದಕ್ಕಿದ್ದಂತೆ ಕುಸಿದಿದೆ. ರಥದ ಸುತ್ತಲೂ ಸಾಕಷ್ಟು ಜನ ಸೇರಿದ್ದರು. ಮೇಲ್ಭಾಗದಲ್ಲೂ ಅರ್ಚಕರ ದಂಡೇ ಇತ್ತು. ದೇವಿಯ ಆಶೀರ್ವಾದವೋ ಎಂಬಂತೆ ಯಾರಿಗೂ ಯಾವುದೇ ಅಪಾಯವೂ ಆಗಿಲ್ಲ.

ಇನ್ನು ಅದು ಬೀಳುವ ಭಾಗದಲ್ಲಿ ನೂರಾರು ಭಕ್ತಾದಿಗಳಿದ್ದರು, ಅದರೆ ಪ್ರಾಣಾಪಾಯ ಸಂಭವಿಸಿಲ್ಲ. ಇದೆಲ್ಲವೂ ದೇವಿಯ ಕೃಪೆಯಿಂದ ನಡೆದಿದೆ. ಅಪಘಾತ ಸಂಭವಿಸಿದರು ಯಾವುದೇ ಸಾವು ನೋವುಗಳು ಆಗಿಲ್ಲ. ಇದು ದೇವಿಯ ಆಶೀರ್ವಾದ ಎಂದು ಜನ ಹೇಳುತ್ತಿದ್ದಾರೆ.

Comments are closed.