Suicide: ಎರಡು ಮಕ್ಕಳನ್ನು ಚಾಕುವಿನಿಂದ ಇರಿದು,ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ!

Suicide: 35 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಕೊಂದ ಬಳಿಕ ತಾನು ಕೂಡಾ ಕಟ್ಟಡವೊಂದರ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಂತಹ ಘಟನೆ ತೆಲಂಗಾಣದ ಗಜುಲರಾಮರಂನ ಬಾಲಾಜಿ ಲೇಔಟ್ ಪ್ರದೇಶದಲ್ಲಿ ನಡೆದಿದೆ.
ಗಜುಲರಾಮರಂನ ಬಾಲಾಜಿ ಲೇಔಟ್‌ನಲ್ಲಿ 35 ವರ್ಷದ ತೇಜ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಾದ ಅರ್ಶಿತ್ ರೆಡ್ಡಿ (11) ಮತ್ತು ಆಶಿಶ್ ರೆಡ್ಡಿ (6) ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ನಂತರ ಆಕೆ ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಹಾಗೂ ಮಕ್ಕಳ ಆರೋಗ್ಯ ಸಮಸ್ಯೆಯೇ ಕಾರಣ ಎಂದು ಶಂಕಿಸಲಾಗಿದೆ.
ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಾಲನಗರದ ಸಹಾಯಕ ಪೊಲೀಸ್ ಆಯುಕ್ತ ಜಿ ಹನುಮಂತ ರಾವ್ ಹೇಳಿದ್ದಾರೆ.
Comments are closed.