Supreme Court : ‘ಉರ್ದು’ ಭಾರತದ ಭಾಷೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Share the Article

 

Supreme Court : ಉರ್ದು ಭಾಷೆಯು ಭಾರತದಲ್ಲಿ ಜನ್ಮ ತಾಳಿದೆ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಹೀಗಾಗಿ ಇದು ಭಾರತದ ಭಾಷೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

 

ಮಹಾರಾಷ್ಟ್ರದ (Maharastra) ಅಕೋಲಾ ಜಿಲ್ಲೆಯ ಪಾತೂರ್ ಪುರಸಭೆಯ ಸೂಚನಾ ಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಎತ್ತಿಹಿಡಿದ ಕೋರ್ಟ್, ಭಾಷೆಯು ಧರ್ಮವನ್ನು ಪ್ರತಿನಿಧಿಸುವುದಿಲ್ಲ, ಬದಲಿಗೆ ಸಂಸ್ಕೃತಿಯ ಭಾಗವಾಗಿದೆ ಎಂದು . ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಸ್ಪಷ್ಟಪಡಿಸಿದೆ.

 

ಅಲ್ಲದೆ ನ್ಯಾ, ತೀರ್ಪಿನಲ್ಲಿ, ಉರ್ದು ಭಾಷೆಯು ಭಾರತದ ಗಂಗಾ-ಜಮುನಿ ತಹಜೀಬ್‌ನ (ಹಿಂದೂಸ್ತಾನಿ ಸಂಸ್ಕೃತಿಯ) ಉತ್ತಮ ಮಾದರಿಯಾಗಿದೆ ಎಂದು ಕೋರ್ಟ್ ಒತ್ತಿ ಹೇಳಿದೆ. ಉರ್ದು ಭಾರತದಲ್ಲಿ ಜನ್ಮತಾಳಿದ ಭಾಷೆಯಾಗಿದ್ದು, ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಭಾಷೆಯನ್ನು ಧರ್ಮದೊಂದಿಗೆ ಗುರುತಿಸುವುದು ನಮ್ಮ ತಪ್ಪು ಊಹೆಗಳು ಮತ್ತು ಕೆಲವೊಮ್ಮೆ ಪೂರ್ವಾಗ್ರಹಗಳಿಂದ ಕೂಡಿದೆ ಎಂದು ನ್ಯಾಯಾಲಯ ತಿಳಿಸಿದೆ.

Comments are closed.