Noida: ತನ್ನ ಮಗುವಿಗೆ ಬೊಗಳಿತೆಂದು ಸಾಕು ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿ!

Noida: ನೆರೆಮನೆಯ ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಗುವಿಗೆ ಬೊಗಳಿದೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ನಾಯಿಯನ್ನು ಥಳಿಸಿ ಬಳಿಕ ತನ್ನ ಕಾರಿಗೆ ಕಟ್ಟಿ ಮೂರು ಕಿ.ಮೀ. ಎಳೆದು ಕೊಂಡು ಹೋದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ನೆರೆಮನೆಯವರಿಗೆ ಸೇರಿದ ಸಾಕು ನಾಯಿ ಇದಾಗಿದ್ದು. ನಾಯಿಯನ್ನು ಹೊರಗೆ ಕಟ್ಟಿ ಹಾಕಲಾಗಿತ್ತು. ಈ ಸಮಯದಲ್ಲಿ ಮನೆಯ ಹೊರಗೆ ನಿಂತಿದ್ದ ಆರೋಪಿಯ ಮಗಳನ್ನು ಕಂಡು ನಾಯಿ ಬೊಗಳಿದೆ. ಮಗು ಭಯಗೊಂಡು ಅಳಲಾರಂಭಿಸಿತು. ಇದರಿಂದ ಕೋಪಗೊಂಡ ವ್ಯಕ್ತಿ ನಾಯಿಗೆ ಕೋಲುಗಳಿಂದ ಹಲ್ಲೆ ಮಾಡಿ, ತನ್ನ ಕಾರಿಗೆ ಕಟ್ಟಿ ಎಳೆದೊಯ್ದಿದ್ದಾನೆ.
ಈ ಕುರಿತು ನಾಯಿಯ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ನೀಡಿದರೆ ಕೊಲ್ಲುವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆ ನೀಡಲಾಗಿದೆ.
ಡಂಕೌರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Comments are closed.