ಜನಿವಾರಕ್ಕೆ ಕತ್ತರಿ ಹಾಕಿದ ಅಧಿಕಾರಿ ಸಸ್ಪೆಂಡ್‌ಗೆ ಸಚಿವ ಬಂಗಾರಪ್ಪ ಆದೇಶ

Shivamogga: ವಿವಿಧ ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸಿದ ಯುಜಿಸಿಇಟಿ-25 ಪರೀಕ್ಷೆಯನ್ನು ನಡೆಸಿದ್ದು, ಈ ವೇಳೆ ಪರೀಕ್ಷೆ ಬರೆಯಲು ಬಂದಿದ್ದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕತ್ತರಿ ಹಾಕಿದ ಪ್ರಕರಣವು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಆರೋಪದ ಮೇಲೆ ಬ್ರಾಹ್ಮಣ ಸಚಿವರು, ಶಾಸಕರಿಂದಲೂ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷಾ ಕೇಂದ್ರದ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಡಿಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆದೇಶಿಸಿದ್ದಾರೆ.
ಬೀದರ್‌ನಲ್ಲೂ ಇಂತಹದ್ದೆ ಪ್ರಕರಣ ವರದಿಯಾಗಿದ್ದು, ಪೋಷಕರು ಹಾಗೂ ಬ್ರಾಹ್ಮಣ ಸಮುದಾಯದ ಮುಖಂಡರು ನ್ಯಾಯಕ್ಕಾಗಿ ಆಗ್ರಹಿಸಿದ್ದು, ಜನಿವಾರ ತೆಗೆಸಲು ಮುಂದಾಗಿದ್ದ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದ್ದಾರೆ.
ಹಿಜಾಬ್ ವಿಚಾರಕ್ಕೆ ಬಂದಾಗ ಪರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಜನಿವಾರದ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ ಎಂದು ಅನೇಕ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಜನಿವಾರಕ್ಕೆ ವಿರೋಧಿಸಿದ್ದ ಪರೀಕ್ಷಾ ಕೇಂದ್ರದ ಅಧಿಕಾರಿಯನ್ನು ಅಮಾನತು ಮಾಡುವುದು ಮಾತ್ರವಲ್ಲ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಕ್ರೋಶ ವ್ಯಕ್ತವಾಗಿದೆ.
Comments are closed.