Mangalore: ಏಪ್ರಿಲ್ 18ರ ವಕ್ಫ್ ಹೋರಾಟದ ಹಿನ್ನೆಲೆ: ನೇಮೋತ್ಸವದ ಧ್ವಜಪತಾಕೆ, ಬಂಟಿಂಗ್ಸ್ ತೆಗೆಯುವಂತೆ ಪೊಲೀಸರ ಆದೇಶ!

Share the Article

Mangalore (Adyar): ಈ ಹಿಂದೆಯೇ ನಿಗದಿಯಾದಂತೆ ಅಡ್ಯಾರ್ನಲ್ಲಿ ನಡೆಯಲಿರುವ ಗ್ರಾಮ ದೈವಗಳ ನೇಮೋತ್ಸವಕ್ಕೆ ಹಾಕಿದ್ದ ನೇಮೋತ್ಸವದ ಧ್ವಜಪತಾಕೆ ಬಂಟಿಂಗ್ಸ್ ಹಾಗೂ ಇನ್ನಿತರ ಬೃಹತ್ ಕಟೌಟ್ಗಳನ್ನು ಏಪ್ರಿಲ್ 18ರಂದು ನಡೆಯಲಿರುವ ವಕ್ಫ್ ಹೋರಾಟದ ಹಿನ್ನೆಲೆಯಲ್ಲಿ ತೆಗೆಯುವಂತೆ ಪೊಲೀಸರು ಆದೇಶ ನೀಡಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟವರಿಗೆ ಆದೇಶ ನೀಡಿರುವುದನ್ನು ಮತ್ತು ವಕ್ಫ್ ಹೋರಾಟಕ್ಕೆ ಬೇಕಾಗಿ ಹೆದ್ದಾರಿಯನ್ನು ಬಂದ್ ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುವುದಕ್ಕೆ ಕ್ರೋಧಗೊಂಡಿರುವ ನೇಮೋತ್ಸವದ ಸಂಘಟಕರು, ಊರವರು, ಹಾಗೂ ಹಿಂದೂ ಸಂಘಟನೆಗಳ ಸಹಿತ ಶಾಸಕ ವೇದವ್ಯಾಸ ಕಾಮತ್,ಶಾಸಕ ಭರತ್ ಶೆಟ್ಟಿ, ಶಾಸಕ ಹರೀಶ್ ಪೂಂಜ ಮುಂತಾದವರು ಪೊಲೀಸರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರಲ್ಲದೆ ವಕ್ಫ್ ಹೋರಾಟ ಸರಕಾರದ ವಿರುದ್ಧವೋ ಅಥವಾ ಹಿಂದುಗಳ ವಿರುದ್ಧವೋ? ಇಂದು ಪ್ರಶ್ನಿಸಿದ್ದಾರೆ.

ನ್ಯಾಯಕ್ಕಾಗಿ, ನ್ಯಾಯಯುತವಾಗಿ ಹೋರಾಟ ಮಾಡಬೇಕೆ ಹೊರತು ಇತರರಿಗೆ ಅನ್ಯಾಯ, ತೊಂದರೆ, ಅಡ್ಡಿ, ಆತಂಕಗಳನ್ನುಂಟು ಮಾಡಿ ಈ ರೀತಿ ಜನರನ್ನು ಒಟ್ಟು ಸೇರಿಸುವುದು ಹೋರಾಟ ಅನಿಸಿಕೊಳ್ಳುವ ಬದಲು ಪಿತೂರಿಗಾಗಿ ನಡೆಸುವ ಜನಪ್ರದರ್ಶನ ಎಂಬಂತಾಗುತ್ತದೆ. ಇಂಥದ್ದಕ್ಕೆಲ್ಲ ಪೊಲೀಸರು ಅವಕಾಶ ನೀಡದೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Comments are closed.