‘ಎಡಗೈಯೇ ಅಪಘಾತಕ್ಕೆ ಕಾರಣ’- ಏನಿದು ವಿಚಿತ್ರ ಟೈಟಲ್?

Share the Article

Bengaluru: ಅಪಘಾತಕ್ಕೆ ಎಡಗೈಯೇ ಕಾರಣವಂತೆ. ಹೀಗೆಂದು ಹೊಸ ಸುದ್ದಿ ಬಂದಿದೆ. ಯಾವ ಅಪಘಾತ, ವಾಹನದ ಆಕ್ಸಿಡೆಂಟ್’ನಾ ಅಥವಾ ಬದುಕಿನ ಯಾವುದೇ ಇತರ ಅಪಘಾತವೇ? ಅಥ್ವಾ ಸ್ವೀಟ್ ಅಪಘಾತವಾದ ಪ್ರೀತಿಯ ಬಗ್ಗೆ ಹೀಗೆ ಹೇಳ್ತಾ ಇದ್ದಾರ?!

ಅಪಘಾತಕ್ಕೆ ಎಡಗೈಯೇ ಹೇಗೆ ಕಾರಣ ಆಗುತ್ತೆ? ಕಾರಣ ಹುಡುಕುತ್ತಾ ಒಮ್ಮೆ ನಮ್ಮ ಮನಸ್ಸು ಎಡಗೈಲಿ ಮಾಡುವ ಕೆಲಸಗಳ ಪಟ್ಟಿ ಮಾಡಲು ಹೊರಟರೂ ಅಚ್ಚರಿ ಇಲ್ಲ. ಪಟ್ಟಿ ನೋಡಿ ನಾಚಿ ಕೊಂಡರೆ ಅದು ಸಹಜ ತಾನೆ?

ಕಾಂತಾರ ಡ್ಯೂಪರ್ ಸಕ್ಸಸ್ ನ ನಂತರ ಯಾವುದೇ ಹೊಸ ಸಕ್ಸಸ್ ಕಾಣದೆ ಇದ್ದ ಕನ್ನಡ ಚಿತ್ರರಂಗದಲ್ಲಿ ಇದೀಗ ಸಂಚಲನ ಉಂಟುಮಾಡುವ ಚಿತ್ರ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ವಿಶಿಷ್ಟ ಶೀರ್ಷಿಕೆಯ ಚಿತ್ರವನ್ನು ಬರುತ್ತಿದೆ. ಸಿನಿಮಾಗಳಾದ ‘ಬ್ಲಿಂಕ್’ (Blink) ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಒಟ್ಟಿಗೆ ಸೇರಿ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.

ದಿಗಂತ್ ಮಂಚಾಲೆ (Diganth Manchale) ನಟನೆಯ ಸಮರ್ಥ್ ಕಡ್ಕೊಳ್ ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಅನಿರೀಕ್ಷಿತ ಆಘಾತಗಳನ್ನು ಎದುರಿಸಿ ರಿಲೀಸ್ ಆಗದೆ ಮುಂದಕ್ಕೆ ಹೋಗುತ್ತಲೇ ಇತ್ತು. ಆದರೆ ಈಗ ನಿರ್ಮಾಪಕ ರವಿಚಂದ್ರ ಎ.ಜೆ ಹಾಗೂ ನಿರ್ಮಾಪಕ ರಾಜೇಶ್ ಕೀಳಂಬಿ ಸೇರಿ ಈ ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ಈಗ ಈಗ ಎಡಗೈಗೆ ಮರು ಜೀವ ಬಂದಿದೆ.

‘ಎಡಗೈಯೇ ಅಪಘಾತಕ್ಕೆ ಕಾರಣ’ ಈಗಾಗಲೇ ಪೋಸ್ಟರ್ ಮತ್ತು ಟೀಸರ್‌ಗಳ ಮೂಲಕ ಕುತೂಹಲವನ್ನು ಹೆಚ್ಚಿಸಿದೆ. ಯಾವಾಗಲೂ ಲವರ್ ಬಾಯ್ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಗಂತ್‌ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಎಡಗೈ ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬಲಗಾಲಿಟ್ಟು ಬರಲಿದೆ. ಎಡಗೈ ಅಪಘಾತಕ್ಕೆ ಹೇಗೆ ಕಾರಣ ಅನ್ನೋ ಸಸ್ಪೆನ್ಸ್’ನ್ನು ಚಿತ್ರತಂಡ ಇನ್ನೂ ಬಿಟ್ಟು ಕೊಟ್ಟಿಲ್ಲ.

Comments are closed.