Muliya: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಪಾಕಶಾಲೆ ಉದ್ಘಾಟನೆ: ಗ್ರಾಹಕರಿಗೆ ಮಧ್ಯಾಹ್ನ ಊಟ, ಸಂಜೆ ಉಪಹಾರ!

Share the Article

ಪುತ್ತೂರು: ಸದಾ ಹೊಸತನ ಮತ್ತು ವಿಶೇಷತೆಗಳಿಗೆ ಹೆಸರಾದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಗ್ರಾಹಕರಿಗೆ ಮತ್ತು ಸಿಬಂದಿಗಳಿಗೆ ಮನೆ ಪದ್ಧತಿಯ ಅಪರಾಹ್ನ ಭೋಜನ ಹಾಗೂ ಸಂಜೆ ಉಪಹಾರ ನೀಡುವ ನೂತನ ಪಾಕಶಾಲೆ ಹಾಗೂ ಭೋಜನಶಾಲೆ ಆರಂಭಿಸಿದೆ.

ಮನೆ ಮನ ಗೆದ್ದಿರುವ ಯುವ ಉದ್ಯಮಿ ಹಾಗೂ ಭಟ್ ಅಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಅವರು ಈ ಶಾಲೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಮಾತನಾಡುತ್ತಾ “ಗ್ರಾಹಕ ಸಂತೃಪ್ತಿಯ ಅದ್ಯತೆಯಲ್ಲಿ ಸಿಬಂದಿಗಳಿಗೂ ಒಳಗೊಂಡಂತೆ ಅಪರಾಹ್ನ ಊಟ ಹಾಗೂ ಸಂಜೆಯ ಉಪಹಾರ ವ್ಯವಸ್ಥೆಯ ಬಗ್ಗೆ “ವಿವರಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪ್ರದೀಪ್ ಕುಮಾರ್ ಬಡೆಕ್ಕಿಲ ಮಾತನಾಡುತ್ತ ಚಿನ್ನದ ಮಳಿಗೆಯಲ್ಲಿ ಚಿನ್ನದಂತ ಪ್ರೀತಿ ,ಕುಟುಂಬ ರೀತಿಯ ಊಟ ಉಪಚಾರ ಇದಾಗಿದೆ ಎಂದು ಈ ವ್ಯವಸ್ಥೆಯನ್ನು ಶ್ಲಾಘಿಸಿದರು.

ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ “ನಮ್ಮಲ್ಲಿ ರಾಸಾಯನಿಕ ಮುಕ್ತ ಪದಾರ್ಥಗಳಿಂದಲೇ ಊಟ ಉಪಹಾರ ತಯಾರಿಸಿ ಮನೆ ಪದ್ದತಿಯಲ್ಲಿ ಸಿಬಂದಿಗಳಿಗೆ ಮತ್ತು ಗ್ರಾಹಕರಿಗೆ ಉಣ ಬಡಿಸುವ ವ್ಯವಸ್ಥೆ, ಗ್ರಾಹಕರಿಗೆ ಸಂತೋಷ ಮತ್ತು Existence ನತ್ತ ಹೊಸ ಹೆಜ್ಜೆ ” ಎಂದರು.

Comments are closed.