GST on UPI: 2000 ರೂ. ಮೇಲ್ಪಟ್ಟ ಯುಪಿಐ ವಹಿವಾಟಿಗೆ ಜಿಎಸ್‌ಟಿ!?

GST on UPI: 2000 ರೂ. ಮೇಲ್ಪಟ್ಟ ಯುಪಿಐ ವಹಿವಾಟಿಗೆ (GST on UPI) ಕೇಂದ್ರ ಸರ್ಕಾರವು ಶೇ 18 ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿದೆ. ಈ ಕ್ರಮವು ಭಾರತಾದ್ಯಂತ ಖಾಸಗಿ ಗ್ರಾಹಕರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಇದುವರೆಗೂ ಜಿಎಸ್‌ಟಿ ಹೇರಿಕೆಯ ಬಗ್ಗೆ ಕೇಂದ್ರ ಯಾವುದೇ ಸ್ಪಷ್ಟ ಹೇಳಿಕೆ ನೀಡದಿದ್ದರೂ, ಯುಪಿಐ ಪೇಮೆಂಟ್ ಮೇಲೆ ಶೇ 18 ತೆರಿಗೆ ವಿಧಿಸುವ ಪ್ರಸ್ತಾಪವನ್ನಂತೂ ಇರಿಸಲಾಗಿದೆ. ದೇಶಾದ್ಯಂತ ಯುಪಿಐ ವಹಿವಾಟು ಮೂಲಭೂತ ಸೌಕರ್ಯವಾಗಿ ಮಾರ್ಪಾಡಾಗಿದ್ದು, ಇದುವರೆಗೂ ಯಾವುದೇ ಶುಲ್ಕವಿಲ್ಲದೇ ಸೇವೆ ನೀಡಲಾಗುತ್ತಿತ್ತು. ಇದರಿಂದ ಸಾಮಾನ್ಯ ಜನರು, ಸಣ್ಣಪುಟ್ಟ ವ್ಯಾಪಾರಿಗಳು, ಫ್ರೀಲ್ಯಾನ್ಸ್ ಕಾರ್ಮಿಕರು ತೊಂದರೆಗೊಳಗಾಗುವ ಸಾಧ್ಯತೆಯಿದೆ.
ಆದ್ರೆ ಎಂದಿನಿಂದ ಈ ತೆರಿಗೆ ಹೇರಿಕೆ ಜಾರಿಗೊಳಿಸಲಾಗುವುದು ಎಂಬ ಬಗ್ಗೆ ಇದುವರೆಗೂ ಕೇಂದ್ರ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿಲ್ಲ.
Comments are closed.