Reels Video: ರೀಲ್ಸ್‌ಗಾಗಿ ರಸ್ತೆಯಲ್ಲಿ ಕುರ್ಚಿ ಹಾಕಿ ಟೀ ಕುಡಿದ ಚಾಲಕ!

Share the Article

Reels Video: ರೀಲ್ಸ್‌ ಮಾಡಲು ನಡು ರಸ್ತೆಯಲ್ಲಿ ಚಹಾ ಕುಡಿಯುತ್ತ ಕುಳಿತು ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮಣ್ಣ ಗಾರ್ಡನ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಆರೋಪಿತನಾಗಿದ್ದು, ಇತ್ತೀಚಿಗೆ ಎಸ್.ಜಿ.ಪಾರ್ಕ್ ಬಳಿ ನಡು ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಚಹಾ ಕುಡಿಯುತ್ತ ಆತ ರೀಲ್ಸ್ ಮಾಡಿದ್ದ. ಈ ಹುಚ್ಚಾಟದಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಸ್ತೆಯಲ್ಲಿ ವಾಹನಗಳಿಗೆ ಅಡ್ಡಪಡಿಸಿದ ಆರೋಪದ ಮೇರೆಗೆ ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ.

ಈ ರೀತಿ ವರ್ತನೆ ತೋರಿದರೆ ಕಠಿಣ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಚಾಲಕನಿಗೆ ಪೊಲೀಸರು ಸಾರ್ವಜನಿಕ ಎಚ್ಚರಿಕೆ ನೀಡಿದ್ದಾರೆ. ತನ್ನ ಕುಟುಂಬದ ಜತೆ ನೆಲೆಸಿರುವ ಪ್ರಶಾಂತ್‌, ಟೆಂಪೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾನೆ. ರೀಲ್ಸ್ ಹುಚ್ಚಿಗೆ ಈಗ ಮೈ ಮೇಲೆ ಕೇಸ್ ಹಾಕಿಸಿಕೊಂಡು ಆತ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

Comments are closed.