Ujire: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಆಟೋ ರಿಕ್ಷಾ! ಸವಾರ ಗಂಭೀರ!

Ujire: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಚರಂಡಿಗೆ ಬಿದ್ದಿರುವ ಘಟನೆ ಎ. 17ರಂದು ರಾತ್ರಿ ಉಜಿರೆಯ ಬೆನಕ ಆಸ್ಪತ್ರೆಯ ಸಮೀಪ ನಡೆದಿದೆ. ರಿಕ್ಷಾ ಚಾಲಕ ಬೆಳ್ತಂಗಡಿಯ ನಿವಾಸಿ ಅಬೂಬಕ್ಕರ್ ಎಂದು ತಿಳಿದುಬಂದಿದೆ.
ಬೆಳ್ತಂಗಡಿಯಿಂದ ಉಜಿರೆ (Ujire) ಕಡೆಗೆ ಪ್ರಯಾಣಿಸುತ್ತಿದ್ದ ಆಟೋ ಬೆನಕ ಆಸ್ಪತ್ರೆಯ ಸಮೀಪದಲ್ಲಿರುವ ಕಿರು ಸೇತುವೆ ನಿರ್ಮಾಣದ ಚರಂಡಿಗೆ ಬಿದ್ದಿದೆ. ಅಬೂಬಕ್ಕರ್ ರವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚರಂಡಿಗೆ ಬಿದ್ದ ರಭಸಕ್ಕೆ ರಿಕ್ಷಾ ಸಂಪೂರ್ಣ ಹಾನಿಯಾಗಿದೆ.
Comments are closed.