Reservation : ಜಾತಿಗಣತಿ ಸಭೆ – ಒಬಿಸಿ ಮೀಸಲಾತಿ 51% ಹೆಚ್ಚಳಕ್ಕೆ ಪ್ರಸ್ತಾವನೆ

Reservation : ಜಾತಿ ಗಣತಿ ವರದಿ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ (ಏಪ್ರಿಲ್ 17) ವಿಶೇಷ ಸಚಿವ ಸಂಪುಟ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಒಬಿಸಿ ಮೀಸಲಾತಿ ಪ್ರಮಾಣವನ್ನು 32ರಿಂದ 51%ಗೆ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಮಂಡನೆಯಾಗಿದೆ.
ಹೌದು, ತಮಿಳನಾಡಿನಲ್ಲಿ ಒಬಿಸಿ ಮೀಸಲಾತಿ ಶೇ. 69ರಷ್ಟಿದೆ ಹಾಗೂ ಜಾರ್ಖಂಡ್‌ನಲ್ಲಿ ಹಿಂದುಳಿದ ವರ್ಗಕ್ಕೆ ಶೇ. 77ರಷ್ಟು ಮೀಸಲಾತಿ ಇದೆ. ಈ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಮೀಸಲಾತಿ ಹೆಚ್ಚಿಸಿ ಎಂದು ಪ್ರಸ್ತಾಪಿಸಲಾಗಿದೆ.
ಈ ಶಿಫಾರಸ್ಸಿನ ಪ್ರಕಾರವೇನಾದರೂ ಒಬಿಸಿಗೆ 51%ಗೆ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಪ್ರವರ್ಗ 2ಎ 10%, ಪ್ರವರ್ಗ 2ಬಿ 8%, ಪ್ರವರ್ಗ 3ಎ 7%, ಪ್ರವರ್ಗ 3ಬಿ 8%, ಪ್ರವರ್ಗ 1ಗೆ 6%, ಪ್ರವರ್ಗ 1ಬಿಗೆ 12% ಮೀಸಲಾತಿ ದೊರೆಯಲಿದೆ.
Comments are closed.