Bangalore: ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ!

Share the Article

Bangalore: ಬಿಜೆಪಿ ಕಾರ್ಯಕತ್ರನೊಬ್ಬ ಫೇಸ್‌ಬುಕ್‌ ವಿಡಿಯೋ ಮಾಡಿಟ್ಟು, ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ನಲ್ಲಿ ನಡೆದಿದೆ.

ಪ್ರವೀಣ್‌ ಗೌಡ ಬೇಲೂರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹಲವರು ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ, ಅವರ ಹೆಸರನ್ನು ರೆಕಾರ್ಡ್‌ ಮಾಡಿ ಪ್ರವೀಣ್‌ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮಂದೂರು ಕಿರಣ, ಗೋಕುಲ್‌ ಫ್ಯಾಷನ್‌ ಹರೀಶ್‌, ಭಾಸ್ಕರ್‌ ನಾರಾಯಣಪ್ಪ, ದೊಡ್ಡ ಹಾಗಡೆ ಮಧುಗೌಡ, ಸರವಣ ಸೇರಿ ಹಲವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.

Comments are closed.