Murder: ಪತ್ನಿ ಎದುರೇ ಪತಿಯ ಶಿರಚ್ಛೇದ, ದೇವಸ್ಥಾನದ ಬಳಿ ರುಂಡ ಪತ್ತೆ!

Share the Article

Murder: ಪತ್ನಿ ಎದುರೇ ಪತಿಯ ಶಿರಚ್ಛೇದ ಮಾಡಿರುವ ಘಟನೆ ತಮಿಳುನಾಡಿನ ತೆಂಕಸಿ ಬಳಿ ನಡೆದಿದೆ. ಮನೆಯಿಂದ 8 ಕಿ.ಮೀ ದೂರದಲ್ಲಿರುವ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.

ತೆಂಕಸಿಯಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಈ ಸಂದರ್ಭದಲ್ಲಿ ಅಪರಿಚಿತ ಗುಂಪೊಂದು ಹೆಂಡತಿಯ ಎದುರೇ ಶಿರಚ್ಛೇದ ಮಾಡಿ, ತಲೆ ತೆಗೆದುಕೊಂಡು ಪರಾರಿಯಾಗಿದ್ದರು. ನಂತರ ಅಪರಾಧ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು 35 ವರ್ಷದ ಕುಥಾಲಿಂಗಂ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿಯೊಂದಿಗೆ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು. ಪೊಲೀಸ್ ವರದಿಗಳ ಪ್ರಕಾರ ದಂಪತಿ ಏಪ್ರಿಲ್ 16ರಂದು ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದಾಗ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ದಾಳಿ ನಡೆಸಿತ್ತು ಎನ್ನಲಾಗಿದೆ.

Comments are closed.