Belthangady: ಬೆಳ್ತಂಗಡಿ ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು!

Share the Article

Belthangady: ಬೆಳ್ತಂಗಡಿ (Belthangady) ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಮನ್ಸೂರ್ ಎಂಬಾತ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬನ್ನೂರು ಪೋಲಿಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

Comments are closed.