Hamsalekha: ನಾದಬ್ರಹ್ಮ ಹಂಸಲೇಖ ಅವರಿಂದ ಮಹಾ ಮೋಸ? ಸುಳ್ಳು ಹೇಳಿ ಬೇರೆಯವ್ರ ಹಾಡಿಗೆ ಕ್ರೆಡಿಟ್?

Hamsalekha: ಸಂಗೀತದ ಮುಖಾಂತರ ಖ್ಯಾತಿಗಳಿಸುವುದರೊಂದಿಗೆ ಕೆಲವು ವಿಚಾರಗಳಾದಿಯಾಗಿ ಆಗಾಗ ವಿವಾದಕ್ಕೆ ಸಿಲುಕುವ ನಾದಬ್ರಹ್ಮ ಹಂಸಲೇಖ ಅವರು ಇದೇ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಹೌದು, ಹಂಸಲೇಖ ಅವರು ಬೇರೆಯವರ ಕೆಲಸದ ಕ್ರೆಡಿಟ್ ಯಾಕೆ ತೆಗೆದುಕೊಂಡ್ರು ಎಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಪ್ರಶ್ನಿಸಿ, ಸರಿಗಮಪ ರಿಯಾಲಿಟಿ ಶೋನಲ್ಲಿ ಹಂಸಲೇಖ ಬೇರೆ ಯಾರದ್ದೋ ಹಾಡಿಗೆ ಕ್ರೆಡಿಟ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ
ಏನಿದು ಘಟನೆ?
‘ಇದು ಏಳೇಳು ಜನ್ಮದ ಲವ್..ಆಗಿಂದ ಇವಳೇ ನನ್ನ ಡವ್… ಸ್ವಸ್ತಿಕ್ ಸಿನಿಮಾದ ಹಾಡು ಮ್ಯೂಸಿಕ್ ಡೈರೆಕ್ಟರ್ ವಿ ಮನೋಹರ್. ಆ ಹಾಡಿಗೆ ಟ್ರ್ಯಾಕ್ ಹಾಡಿದ್ದು ನಾನು. ಆದ್ರೆ ಸರಿಗಮಪದಲ್ಲಿ ಸ್ಪರ್ಧಿ ಹಾಡಿದ ಮೇಲೆ ಕಮೆಂಟ್ ಮಾಡಿದ ಹಂಸಲೇಖ ಅವರು, ಆ ಸಾಂಗ್ ರೆಕಾರ್ಡ್ ಆಗುವಾಗ ಶಂಕರ್ ಶಾನುಭಾಗ್ ಗೆ ಹೇಳಿದ್ದೆ. ನೀನು ಹೆಂಗೆ ಬೇಕಾದರೂ ಹಾಡಪ್ಪ ಅಂತಾ ಫ್ರೀ ಬಿಟ್ಟಿದ್ದೆ ಎಂದಿದ್ದಾರೆ.
ಈ ಕುರಿತಾದೆ ಮಾತನಾಡಿರುವ ಶಂಕರ್ ಶಾನುಭಾಗ್ ಅವರು ‘ಅರೇ ಸಾರ್ವಜನಿಕವಾಗಿ ಇಷ್ಟೊಂದು ದೊಡ್ಡ ಸುಳ್ಳು.. ಹಸಿ ಹಸಿ ಸುಳ್ಳು ಹೇಳೋದಾ? ನಿಜ ಹೇಳಬೇಕಂದ್ರೆ, ರೆಕಾರ್ಡ್ ಮಾಡುವಾಗ ಅಲ್ಲಿ ಹಂಸಲೇಖ ಇರಲೇ ಇಲ್ಲ. ಅವರು ಸಂಗೀತ ಸಂಯೋಜನೆ ಮಾಡಿಲ್ಲ, ಮನೋಹರ್ ಅವರು ಮಾಡಿದ್ದು. ಇದನ್ನ ಮನೋಹರ್ ಬಳಿಯೇ ಕೇಳಿನೋಡಿ ಎಂದು ಆರೋಪಿಸಿದ್ದಾರೆ.
Comments are closed.