CM Siddaramiah : ‘ಒಕ್ಕಲಿಗ, ಲಿಂಗಾಯತರನ್ನು ಎದುರುಹಾಕೊಂಡು ಸರ್ಕಾರ ನಡೆಸುತ್ತೀರಾ’ ಎಂದು ಶಾಮನೂರು ಶಿವಶಂಕರಪ್ಪ – ಒನ್‌ಲೈನ್ ಅಲ್ಲೇ ಉತ್ತರ ಕೊಟ್ಟ ಸಿಎಂ!!

Share the Article

CM Siddaramiah: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ. ಜೊತೆಗೆ ಇದು ಚರ್ಚೆಗೂ ಕೂಡ ಗ್ರಾಸವಾಗಿದೆ.

ಈ ಬೆನ್ನಲ್ಲೇ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಅವರು ಜಾತಿಗಣತಿ ವರದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ‘ಒಕ್ಕಲಿಗರು ಮತ್ತು ಲಿಂಗಾಯತರನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸುತ್ತೀರಾ’ ಎಂದು ಅವಾಜ್ ಹಾಕಿದ್ದರು. ಇದೀಗ ಈ ಕುರಿತು ಸಿಎಂ ಒಂದು ವಾಕ್ಯದಲ್ಲಿ ಉತ್ತರ ನೀಡಿದ್ದು, ‘ನೋಡಪ್ಪ ಇದು ಸೋಷಿಯೋ ಎಕಾನಮಿಕ್ ಸರ್ವೆ. ಯಾರಿಗೂ ಅನ್ಯಾಯ ಆಗಲ್ಲ. ಅನ್ಯಾಯ ಆಗೋದಕ್ಕೆ ನಾವು ಬಿಡಲ್ಲ’ ಎಂದು ಹೇಳಿದ್ದಾರೆ.

Comments are closed.