Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ; ಸಿಗರೇಟ್‌ನಿಂದ ಖಾಸಗಿ ಭಾಗ ಸುಟ್ಟು ವಿಕೃತಿ!

Share the Article

Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ರಾಂಪುರ್‌ನಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಗಳ ಮೂಲಕ ಈ ಕೃತ್ಯ ಒಂದಕ್ಕಿಂತ ಹೆಚ್ಚು ಆರೋಪಿಗಳಿಂದ ನಡೆದಿದೆ ಎನ್ನಲಾಗಿದೆ.

ಬಾಲಕಿಯ ವಿವಿಧ ಭಾಗಗಳಲ್ಲಿ ಕಚ್ಚಿದ , ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟ ಗುರುತು ಪತ್ತೆಯಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಓರ್ವ ಶಂಕಿತನನ್ನು ಬಂಧನ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ.

ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಬಾಲಕಿ ಭಯಭೀತಳಾಗಿದ್ದರಿಂದ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಾಲಕಿಗೆ ಕೃತ್ಯ ನಡೆದ ಆತಂಕದಿಂದ ಫಿಟ್ಸ್‌ ಬರುತ್ತಿದೆ ಎಂದು ಆಕೆಯ ತಾಯಿ ಪೊಲೀಸರಲ್ಲಿ ಹೇಳಿದ್ದಾರೆ.

Comments are closed.