Rajasthan: ದೇವಾಲಯದಲ್ಲಿ ಯುವತಿಯ ಕಾಲಿನ ಫೋಟೋ ತೆಗೆದು ಸಿಕ್ಕಿಬಿದ್ದ ಮುದುಕ!!

Share the Article

Rajasthan: ವೃದ್ಧನೊಬ್ಬ ಯುವತಿಯ ಕಾಲಿನ ಚಿತ್ರಗಳನ್ನು ಕದ್ದು ತೆಗೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ರಾಜಸ್ಥಾನದ ಮೌಂಟ್ ಅಬುವಿನ ದೇಲ್ವಾಡಾ ಜೈನ ದೇವಾಲಯದಲ್ಲಿ ನಡೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಯುವತಿಯೊಬ್ಬರು ದೇವಾಲಯದ ಮುಂದೆ ಶಾಂತವಾಗಿ ಕುಳಿತಿದ್ದಾಗ ಆಕೆಯನ್ನು ಗಮನಿಸುತ್ತಿದ್ದ ವೃದ್ಧ ಆಕೆಯ ಅನುಮತಿಯಿಲ್ಲದೆ ಕಾಲಿನ ಫೋಟೋಗಳನ್ನು ತೆಗೆಯಲು ಶುರು ಮಾಡಿದ್ದಾನೆ. ಯುವತಿ ಇದನ್ನು ಗಮನಿಸಿ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ಮೊದಲು ನಿರಾಕರಿಸಿದ್ದಾನೆ. ಆದರೆ ನಂತರ ಒತ್ತಾಯಿಸಿದಾಗ ತನ್ನ ಮೊಬೈಲ್ ಗ್ಯಾಲರಿ ತೆರೆದು ಫೋಟೋಗಳನ್ನು ತೋರಿಸಿದ್ದಾನೆ. “ನಾನೇನೂ ಮಾಡಿಲ್ಲ, ಇಗೋ ಡಿಲೀಟ್ ಮಾಡಿದೆ” ಎಂದು ಆತ ಉಡಾಫೆಯಿಂದ ಉತ್ತರಿಸಿದ್ದಾನೆ.

ಈ ಘಟನೆಯನ್ನು ಅಲ್ಲಿದ್ದ ಅನುರಾಗ್ ಎಂಬುವವರು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅನುರಾಗ್ ತಮ್ಮ ಪೋಸ್ಟ್‌ನಲ್ಲಿ ದೇವಾಲಯದಲ್ಲಿದ್ದ ಇತರರು ಸಹಾಯಕ್ಕೆ ಬರದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.