Mangaluru: ವಿವಾಹದ ಹಿಂದಿನ ದಿನ ವಧು ನಾಪತ್ತೆ!

Share the Article

Mangaluru: ನಗರದ ಹತ್ತಿರ ವಿವಾಹದ ಮುಂಚಿನ ದಿನ ವಧು ನಾಪತ್ತೆಯಾಗಿರುವ ಕುರಿತು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಬೋಳಾರದ ನಾರಾಯಣ ಎಂಬುವವರ ಪುತ್ರಿ ಪಲ್ಲವಿ (22) ಕಾಣೆಯಾದ ವಧು ಎನ್ನಲಾಗಿದೆ.

ನಿಶ್ಚಿತಾರ್ಥ ಎಲ್ಲ ಈಕೆಯ ಒಪ್ಪಿಗೆಯಂತೆ ನಡೆದಿತ್ತು. ಎ.16 ರಂದು ವಿವಾಹ ನಿಗದಿ ಪಡಿಸಲಾಗಿತ್ತು. ಎ.15 ರಂದು ಮಧ್ಯಾಹ್ನ ಮೆಹಂದಿ ಹಾಕಲೆಂದು ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ವಾಪಸ್‌ ಬಂದಿಲ್ಲ. ಪಲ್ಲವಿಯ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ ಎಂದು ದೂರಿನಲ್ಲಿ ವಧು ಮನೆಯವರು ಪೊಲೀಸರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.

5 ಅಡಿ ಎತ್ತರದ, ಬಿಳಿ ಮೈಬಣ್ಣದ ಸಾಧಾರಣ ಶರೀರದ ಈಕೆ ಕನ್ನಡ, ತುಳು, ಇಂಗ್ಲೀಷ್‌, ಹಿಂದಿ ಮಾತನಾಡುತ್ತಾಳೆ. ಕಾಣೆಯಾದ ದಿನ ಈಕೆ ಬ್ಲೂ ಜೀನ್ಸ್‌ ಪ್ಯಾಂಟ್‌ ಮತ್ತು ಬ್ಲ್ಯಾಕ್‌ ಟೀ ಶರ್ಟ್‌ ಧರಿಸಿದ್ದಾಳೆ ಎಂದು ವರದಿಯಾಗಿದೆ.

ಈಕೆಯ ಸುಳಿವು ಸಿಕ್ಕವರು ಪಾಂಡೇಶ್ವರ ಠಾಣೆ (0824-2220518) ಸಂಪರ್ಕಿಸಲು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.

Comments are closed.