Kukke Subrahmanya Temple: 2024-25ನೇ ಸಾಲಿನ ಕುಕ್ಕೆ ದೇವಸ್ಥಾನದ ಆದಾಯ ರೂ.155.95 ಕೋಟಿ!

Share the Article

Kukke Subrahmanya Temple: ದಕ್ಷಿಣ ಕನ್ನಡ ಜಿಲ್ಲೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯಕ್ಕೆ ಶ್ರೀಮಂತ ದೇವಸ್ಥಾನದಲ್ಲಿ ಮತ್ತೆ ನಂಬರ್‌ ವನ್‌ ಸ್ಥಾನ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

2024-25ನೇ ಸಾಲಿನ ವಾರ್ಷಿಕ ಆದಾಯ 2.155.95 (155,95,19,567). ಕೋಟಿ ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ 9.94 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷ 146.01 ಕೋಟಿ ಆಗಿತ್ತು. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು ಆದಾಯ 155. 95 ಕೋಟಿ ರೂ. ಬಂದಿದ್ದು, ಖರ್ಚು 79.82 ಕೋಟಿ ರೂ (79,82,73,197)

ಧರ್ಮದಾಯ ದತ್ತಿ ಇಲಾಖೆಯಡಿ ಈ ದೇವಸ್ಥಾನ ಬರುತ್ತದೆ. ಇಲ್ಲಿ ನಾಗಾರಾಧನೆಯ ಪ್ರಮುಖವಾಗಿದ್ದು, ರಾಜ್ಯದವರಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಸೇವೆ ಮಾಡುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ ಗಳಿಕೆಯಲ್ಲಿ ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿತ್ತು. ಎರಡನೇ ಸ್ಥಾನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ್ದಾಗಿತ್ತು. ಈ ವರ್ಷವೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೇ ಅತ್ಯಧಿಕ ಆದಾಯ ಸಂಗ್ರಹದ ದೇವಸ್ಥಾನವಾಗುವ ಸಾಧ್ಯತೆ ಇದೆ. ಇಲಾಖೆಯಿಂದ ಅಧಿಕೃತ ಪಟ್ಟಿ ಬಿಡುಗಡೆ ಬಳಿಕ ಮಾಹಿತಿ ಲಭ್ಯವಾಗಲಿದೆ.

Comments are closed.